ಡಿ ಟಿ ಡಿ ಎಮ್ ಪ್ರವೇಶ: ಮೊದಲು ಬಂದವರಿಗೆ ಮೊದಲು ಆಧ್ಯತೆ .

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ:  ರಾಯಚೂರು ಜಿಲ್ಲೆ

ಲಿಂಗಸುಗೂರು :ಪಟ್ಟಣದ ಜಿ ಟಿ ಟಿ ಸಿ ಕಾಲೇಜಿಗೆ ಪ್ರವೇಶಗಳ ಆರಂಭಗೊಂಡಿದ್ದು ಮೊದಲು ಬಂದವರಿಗೆ ಆಧ್ಯತೆ ನೀಡಲಾಗುವುದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಕಾಲೇಜು ಪ್ರಾಚಾರ್ಯ ರಾಜಕುಮಾರ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ತೋಟದ ಪರಿಸರದಲ್ಲಿರುವ ಜಿ ಟಿ ಟಿ ಸಿ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ ಪಾಸಾದ ವಿದ್ಯಾರ್ಥಿಗಳಿಗೆ 4 ವರ್ಷಗಳ ಕೋರ್ಸಗೆ ಪ್ರವೇಶಗಳು ಪ್ರಾರಂಭವಾಗಿವೆ. ಜಿ ಟಿ ಟಿ ಸಿ ಕೋರ್ಸ 3 ವರ್ಷ ಅಧ್ಯಯನದ ಬಳಿಕ 1 ವರ್ಷದ ತರಬೇತಿ ಇರುತ್ತದೆ. ಡಿಪ್ಲೋಮಾ ಇನ್ ಟೂಲ್ ಎಂಡ್ ಡೈ ಮೇಕಿಂಗ್ ಕೈಗಾರಿಕಾ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 12500 ರಿಂದ 16500 ಸಹಾಯ ಧನ ನೀಡಲಾಗುತ್ತದೆ. ಅಲ್ಲದೇ ಮೀಸಲಾತಿ ಅಡಿ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ಫೀ ಸೇರಿ ಇತರೆ ವೆಚ್ಚಗಳ ಹೊರೆ ನಿಗಿಸಲು ಶಿಷ್ಯವೇತನವು ಇರುತ್ತದೆ. ಈಗಾಗಲೆ ಪ್ರವೇಶಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳ ಪ್ರವೇಶ ಪಡೆಯಬೇಕು. ಏಕೆಂದರೆ ಜಿ ಟಿ ಟಿ ಸಿ ಕೋರ್ಸ ಅಧ್ಯಯನ ಮಾಡಿದವರಿಗೆ ಉದ್ಯೋಗದ ನಿಶ್ಚಿತವಾಗಿ ದೊರೆಯುತ್ತದೆ ಎಂದು ಹೇಳಿದರು.

ಪ್ರವೇಶ ಹಾಗೂ ಕೊರ್ಸಗೆ ಸಂಬಂಧಿಸಿದಂತೆ ಕಾಲೇಜು ಪ್ರಾಚಾರ್ಯರ ಮೊಬೈಲ್ ಸಂಖ್ಯೆ 9916231899, 8762564872 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಕೋರಿದ್ದಾರೆ. 

ಈ ವೇಳೆ ಉಸನ್ಯಾಸಕಾರಾದ ಮೌನೇಶ ನಾಯಕ, ಗುರುಬಸ್ಸಪ್ಪ, ದತ್ತಾತ್ರೇಯ, ಮಹಾಂತೇಶ, ಶರಣಬಸವ ಸೇರಿದಂತೆ ಇದ್ದರು.

 

Share and Enjoy !

Shares