ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ
ಲಿಂಗಸುಗೂರು ; ತಾಲೂಕಿನ ಕಾಳಾಪೂರು ಗ್ರಾಮದ ಅನುಸಮ್ಮ ಗಂ ಆದಪ್ಪ ಇವರಿಗೆ ಸರ್ಕಾರದ ತಹಶಿಲ್ದಾರ ಕಾರ್ಯಾಲಯದಿಂದ ಶವ ಸಂಸ್ಕಾರ 5000 ರೂ . ಹಾಗೂ ಸಾಮಾಜಿಕ ಭದ್ರತಾ ಯೋಜನೆ 20000 ರೂ . ಹಾಗೂ ತಿಂಗಳ ಮಾಸಿಕ ವಿಧವಾ ವೇತನ 800 ರೂ.ಗಳು ಹಾಗೂ ರಾಜಮ್ಮ ಗಂ / ನಿಂಗಪ್ಪ ಇವರಿಗೆ ಸಂಧ್ಯಾ ಸುರಕ್ಷಾ ಯೋಜನೆಯ 1200 ರೂ.ಗಳ ಮಂಜೂರಾತಿ ಆದೇಶ ಪ್ರತಿಯನ್ನು ಅಮರೇಶ ಆರ್.ನಾಡಗೌಡ್ರು ಹಾಗೂ ಕಾಳಾಪೂರು ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ ಹೊಸಗೌಡ್ರು ಫಲಾನುಭವಿಗಳಿಗೆ ಮಂಜೂರಾದ ಆದೇಶ ಪ್ರತಿಯನ್ನು ವಿತರಿಸಿದರು .
ಕಾಳಾಪೂರು ಗ್ರಾಮದ ದೇವಪ್ಪ ಭೀರಪ್ಪ ರವರು ಊರಿನ ಹಲವು ಬಡಜನ ಫಲಾನುಭವಿಗಳಿಗೆ ಸರ್ಕಾರದ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ವಿರುಪಾಕ್ಷಯ್ಯ ಹೊಸಮಠ ಕಾಳಾಪೂರು , ಪ್ರಭುರಾಜ , ಶರಣಪ್ಪ ಪೂಜಾರಿ , ನಾರಾಯಣ , ಹನುಮಂತ ಗುಳಗಿ , ಮಲ್ಲಪ್ಪ ಭೋವಿ , ಕಾಳಾಪೂರು ಗ್ರಾಮದ ಯುವಕರು ಹಾಜರಿದ್ದರು ,