ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ದರ್ಜೆಯ ಬಡ್ತಿ​ ನೀಡಿದ ಭಾರತೀಯ ಸೇನೆ

Share and Enjoy !

Shares
Listen to this article

ವಿಜಯನಗರ ವಾಣಿ

ಭಾರತ ಸೇನೆಯ ಆಯ್ಕೆ ಮಂಡಳಿ ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳನ್ನು ಕರ್ನಲ್​ ದರ್ಜೆಯ  ಬಡ್ತಿಗೆ ಆಯ್ಕೆ ಮಾಡುವ ಮೂಲಕ, ಕಾರ್ಪ್ಸ್ ಆಫ್​ ಸಿಗ್ನಲ್​, ಕಾರ್ಪ್ಸ್​ ಆಫ್​ ಎಲೆಕ್ಟ್ರಾನಿಕ್​ ಮತ್ತು ಮೆಕ್ಯಾನಿಕಲ್​ ಇಂಜಿನಿಯರ್ಸ್ (EME) ​ಮತ್ತು ಕಾರ್ಪ್ಸ್​ ಆಫ್​ ಇಂಜಿನಿಯರ್​​ ಶ್ರೇಣಿಯ ಮಹಿಳಾ ಅಧಿಕಾರಿಗಳಿಗೆ ಟೈಂ ಸ್ಕೇಲ್​​ನ ಕರ್ನಲ್​ ದರ್ಜೆ ಬಡ್ತಿ ನೀಡುವ ಮಾರ್ಗವನ್ನು ಸುಗಮಗೊಳಿಸಿದೆ. ಸೇನೆಯಲ್ಲಿ ಈವರೆಗೆ ಆರ್ಮಿ ವೈದ್ಯಕೀಯ ಕಾರ್ಪ್ಸ್​ (SMC), ಜಡ್ಜ್​ ಅಡ್ವೋಕೇಟ್​​ (JAG) ಮತ್ತು ಆರ್ಮಿ ಶೈಕ್ಷಣಿಕ ಕಾರ್ಪ್ಸ್​ (AEC)ನ ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್​ ಶ್ರೇಣಿ ಪ್ರಮೋಶನ್​ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಸೇನಾ ಆಯ್ಕೆ ಮಂಡಳಿಯ ನಿರ್ಧಾರ ಬಹುಮಹತ್ವ ಪಡೆದುಕೊಂಡಿದೆ.

ಸೇನೆಯ ಕಾರ್ಪ್ಸ್ ಆಫ್​ ಸಿಗ್ನಲ್​ (ಸಂಕೇತ ದಳ)ನ ಲೆಫ್ಟಿನಂಟ್​ ಕರ್ನಲ್​ ಸಂಗೀತಾ ಸರ್ದಾನಾ, ಇಎಂಇ ವಿಭಾಗದ ಲೆಫ್ಟಿನೆಂಟ್​ ಕರ್ನಲ್​ಗಳಾದ ಸೋನಿಯಾ ಆನಂದ್​ ಮತ್ತು ನವನೀತ್​ ದುಗ್ಗಾಲ್​, ಇಂಜಿಯರಿಂಗ್​ ಕಾರ್ಪ್ಸ್​ನ ಲೆಫ್ಟಿನೆಂಟ್​ ಕರ್ನಲ್​ಗಳಾದ ರೀನು ಖನ್ನಾ ಮತ್ತು ರಿಚಾ ಸಾಗರ್​ ಅವರಿಗೆ ಸದ್ಯ ಟೈಂ ಸ್ಕೇಲ್​​ನ ಕರ್ನಲ್​ ಶ್ರೇಣಿಗೆ ಬಡ್ತಿ ನೀಡಲಾಗಿದ್ದು, ಇವರೆಲ್ಲರೂ ತಮ್ಮ ತಮ್ಮ ವಿಭಾಗ, ದಳದಲ್ಲಿ 26 ವರ್ಷ ಸೇವೆ ಸಂಪೂರ್ಣಗೊಳಿಸಿದವರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ರಚಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಹೀಗಾಗಿ ಸೇನೆಯ ಬಹುತೇಕ ವಿಭಾಗಗಳಲ್ಲಿ ಶಾಶ್ವತ ಆಯೋಗ ರಚಿಸುವ ಜತೆ, ಉನ್ನತ ಶ್ರೇಣಿಗಳಿಗೆ ಬಡ್ತಿ ನೀಡುವುದನ್ನೂ ಹೆಚ್ಚೆಚ್ಚು ವಿಭಾಗಗಳಿಗೆ ವಿಸ್ತರಿಸುವ ಮೂಲಕ, ಸೇನೆಯಲ್ಲಿ ಲಿಂಗ ತಟಸ್ಥ ನೀತಿ ಅನುಸರಣೆಗೆ ಮುಂದಡಿ ಇಡಲಾಗುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.

 

Share and Enjoy !

Shares