ವಕೀಲ ಮೋಹನ್ ಕುಮಾರ್ ದಾನಪ್ಪನವರಿಗೆ ಗೌರವ ಡಾಕ್ಟರೇಟ್ ಪ್ರಧಾನ

Share and Enjoy !

Shares
Listen to this article

 

ತಮಿಳ್ ನಾಡು (ಹೊಸೂರ್) ಆಗಸ್ಟ್: 27 ರಂದು ಹೋಟೆಲ್ ಕ್ಲಾರೆಸ್ಟ ದಲ್ಲಿ ಇಂಡಿಯನ್ ಎಂಪೈರ್ ಯೂನಿವರ್ಸಿಟಿಯು ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಸಾಮಾಜಿಕ ಹೋರಾಟಗಾರ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಅವರ ಸಾಮಾಜಿಕ ರಂಗದ ಅನುಪಮ ಸೇವೆಯನ್ನ ಗುರುತಿಸಿ “ಗೌರವ ಡಾಕ್ಟರೇಟ್”ನ್ನು ಇಂಡಿಯನ್ ಎಂಪೈರ್ ಯೂನಿವರ್ಸಿಟಿ ಛೇರ್ಮನ್ ಹಾಗೂ ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಸಿ.ಪಾಲ್ ಇಬನೇಜರ್, ಯುಡಿಸಿ ಮತ್ತು ಐಈಯು ವೈಸ್ ಪ್ರೆಸಿಡೆಂಟ್ ಡಾ.ಕೆ.ಪ್ರಭಾಕರ್, ತಮಿಳು ನಾಡಿನ ಮಾಜಿ ಶಾಸಕ ಡಾ.ಕೆ.ಎ.ಮನೋಹರನ್, ಪಿ ಡಬ್ಲ್ಯೂಡಿಯ ನಿವೃತ್ತ ವಿಶೇಷ ಮುಖ್ಯ ಅಭಿಯಂತರರಾದ ಡಾ. ಆರ್. ಇಳಂಗೋವನ್, ಡಾ.ಸುಮನ್ ತಲ್ವಾರ್ ರವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು, 

ನಂತರ ಗೌರವ ಡಾಕ್ಟರೇಟ್ ಸ್ವೀಕರಿಸಿ ಮೋಹನ್ ಕುಮಾರ್ ದಾನಪ್ಪನವರು ” ಸಾಮಾಜಿಕ ಸೇವೆಯನ್ನ ಗುರುತಿಸಿ ನೀಡುವ ಪ್ರಶಸ್ತಿ ಪ್ರಧಾನಗಳು ಸಮಾಜದಲ್ಲಿ ನಮ್ಮ ಗೌರವವನ್ನ ಹೆಚ್ಚಿಸುವುದಲ್ಲದೇ ಸಾಮಾಜಿಕ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ, ಸಾಮಾಜಿಕ ರಂಗದಲ್ಲಿ ಕಳೆದ 12 ವರ್ಷಗಳಿಂದ ಸಲ್ಲಿಸಿದ ಸೇವೆಯನ್ನ ಗುರುತಿಸಿ ನೀಡಿರುವ ಈ ಗೌರವ ಡಾಕ್ಟರೇಟ್ ನನಗೆ ಸಮಾಜ ಸೇವೆಗೆ ಇನ್ನಷ್ಟು ಸ್ಪೂರ್ತಿ ನೀಡಿದ್ದು ದಲಿತ ಹಿಂದುಳಿದ ಅಲ್ಪ ಸಂಖ್ಯಾತರ ಶೋಷಿತರ, ಧ್ವನಿಯಾಗಿ ಸೇವೆ” ಸಲ್ಲಿಸುವುದಾಗಿ ತಿಳಿಸಿದರು,

Share and Enjoy !

Shares