ವಿಜಯನಗರ ವಾಣಿ ಸುದ್ದಿ ಕುರುಗೋಡು
ಕುರುಗೋಡು. ಅಂದಿನ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ, ಕುರುಗೋಡು, ಕೊಟ್ಟೂರು ಈ 3 ನೂತನ ತಾಲೂಕುಗಳಾಗಿ ಘೋಷಣೆ ಮಾಡಿದ್ದರು, ಇದರ ಮದ್ಯೆ ಪ್ರಸ್ತುತ ರಾಜ್ಯ ಸರಕಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ತಮ್ಮ ಆಡಳಿತದಲ್ಲಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಗಿಸಿದ್ದರು,
ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಗೆ ಅಥವಾ ವಿಜಯನಗರ ಜಿಲ್ಲೆಗೆ ಅಂತ ತಾಲೂಕಿನ ಬಹುತೇಕ ಜನರು ಗೊಂದಲದಲ್ಲಿದ್ದರು. ಕುರುಗೋಡು ತಾಲೂಕಿನಲ್ಲಿದ್ದ ಎಮ್ಮಿಗನೂರು ಗ್ರಾಮವನ್ನು ಕಂಪ್ಲಿ ತಾಲೂಕಿಗೆ ಸೇರ್ಪಡೆ ಗೊಂಡಿದ್ದು ಪ್ರಾರಂಭದಲ್ಲಿ ಸ್ಥಳೀಯರಿಂದ ಪರ ವಿರೋಧಗಳು ಕೂಡ ವ್ಯಕ್ತವಾಗಿದ್ದವು.
ಆದರೆ ಈಗ ಸದ್ಯದ ಪರಿಸ್ಥಿತಿ ಯ ಮದ್ಯೆ ಕಂಪ್ಲಿ ರಾಜಕೀಯ ವಲಯದಲ್ಲಿ ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆ ಗೆ ಸೇರ್ಪಡೆ ಗೊಳ್ಳುವುದು ನಿಶ್ಚಿತ ಎಂಬುದು ಎದ್ದು ಕಾಣುವುದರ ನಡುವೆ ಎಮ್ಮಿಗನೂರು ಗ್ರಾಮಸ್ಥರು ಬುಗಿಲೆದ್ದು ನಿಂತಿದ್ದಾರೆ.
ಹೌದು ಎಮ್ಮಿಗನೂರು ಗ್ರಾಮವು ಕಂಪ್ಲಿ ತಾಲೂಕಿಗೆ ಸೇರ್ಪಡೆ ಗೊಂಡಿರುವುದಕ್ಕೆ ಯಾವುದೇ ವಿರೋಧ ಇಲ್ಲ. ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಯಾಗಬಾರದು ಅಖಂಡ ಬಳ್ಳಾರಿ ಜಿಲ್ಲೆಯಲ್ಲೇ ಉಳಿಯಬೇಕು ಎಂಬುವುದು ಎಮ್ಮಿಗನೂರು ಗ್ರಾಮದವರ ಆಶಯ ವಾಗಿದೆ. ಒಂದು ವೇಳೆ ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಯಾಗುವುದಾದರೆ ಎಮ್ಮಿಗನೂರು ಗ್ರಾಮವನ್ನು ಇದ್ದಂಗೆ ಕುರುಗೋಡು ತಾಲೂಕಿಗೆ ಕೈ ಬಿಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಮುಖಂಡರು.
ಎಮ್ಮಿಗನೂರು ಗ್ರಾಮದ ಸಾರ್ವಜನಿಕರು ಅತಿ ಹೆಚ್ಚಾಗಿ ಕುರುಗೋಡು ಮತ್ತು ಕಂಪ್ಲಿ, ಬಳ್ಳಾರಿ ಜಿಲ್ಲೆಯಲ್ಲಿ ವ್ಯವಹಾರ ಮಾಡುತ್ತಿದ್ದು, ಕೃಷಿ, ತೋಟಗಾರಿಕೆ, ಶಿಕ್ಷಣ, ವಾಣಿಜ್ಯ ವ್ಯಾಪಾರ ಗಳು, ಸೇರಿದಂತೆ ಬಹುತೇಕ ರೈತರ ಕಾರ್ಯಗಳು ಬಳ್ಳಾರಿ ಜಿಲ್ಲೆಯಲ್ಲೇ ನಡೆಯುವುದರಿಂದ ಎಮ್ಮಿಗನೂರು ಗ್ರಾಮವನ್ನು ಅಖಂಡ ಬಳ್ಳಾರಿ ಜಿಲ್ಲೆಯಲ್ಲೇ ಉಳಿಸಬೇಕು ಎಂದು ರೈತರು ಪಟ್ಟು ಹಿಡಿಯುತ್ತಿದ್ದಾರೆ.
ಒಂದು ವೇಳೆ ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಯಾದರೆ ಎಮ್ಮಿಗನೂರು ಗ್ರಾಮ ಕಂಪ್ಲಿ ತಾಲೂಕಿನಿಂದ ಕೈ ಬಿಡದಿದ್ರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದರಲ್ಲಿ ಯಾವುದೇ ಅನುಮಾನ ವಿಲ್ಲ ಎಂದು ಗ್ರಾಮದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಬೇಗ್ಗಿ ಮಹೇಶ್ ಗೌಡ, ಬಿ. ಸದಾಶಿವಪ್ಪ, ಪ್ರಗತಿ ಪರ ರೈತ ಮುಖಂಡರಾದ ಗಾದ್ಲಿ ನಾಗಿರೆಡ್ಡಿ, ವೈ. ಅಶ್ವತ್ ರೆಡ್ಡಿ, ಡಿ. ಕಾಶಿಮ್ ಸಾಬ್, ದಾಸರಿ ನಾರಾಯಣಪ್ಪ, ನಾರಾಯಣ ರೆಡ್ಡಿ, ವೀರಪುರ ಮಲ್ಲಪ್ಪ ಸೇರಿದಂತೆ ಇತರರು ಇದ್ದರು.