ತಾಲೂಕಿನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ

Share and Enjoy !

Shares
Listen to this article

ಸಿರುಗುಪ್ಪ:- ತಾಲೂಕಿನಲ್ಲಿ ಮೆಗಾ ಲಸಿಕಾ ಅಭಿಯಾನದ ಅಂಗವಾಗಿ ತಾಲೂಕಿನ 27 ಗ್ರಾ.ಪಂ.ಗಳ ಕಛೇರಿ, 8 ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಸಮುದಾಯ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂತಾದ ಕಡೆಗಳಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಯಿತು.
ತಾಲೂಕಿನ ಗ್ರಾಮೀಣ ಮತ್ತು ತೆಕ್ಕಲಕೋಟೆ ಪಟ್ಟಣ, ಸಿರುಗುಪ್ಪ ನಗರದಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಲಸಿಕೆ ಕಾರ್ಯವಾಗಿರುತ್ತದೆಂದು, ಆದ್ದರಿಂದ ಲಸಿಕೆ ಪಡೆಯುವವರ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ ತಾಲೂಕಿನಲ್ಲಿ ಶುಕ್ರವಾರ ಮೆಗಾ ಲಸಿಕಾ ಅಭಿಯಾನ ನಡೆಯಿತು.
ತಾಲೂಕಿನಾದ್ಯಂತ ಸುಮಾರು 3 ಸಾವಿರ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಿರುವ ಆರೋಗ್ಯ ಇಲಾಖೆಯು ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ, ಮನೆ ಮನೆಗೆ ತೆರಳಿ ಲಸಿಕೆ ಪಡೆಯುವಂತೆ ಸಾರ್ವಜನಿಕರನ್ನು ಮನವೊಲಿಸುವ ಕಾರ್ಯ ಮಾಡುತ್ತಿರುವುದು, ಪ್ರತಿ ಗ್ರಾಮಗಳಲ್ಲಿ ಕಂಡುಬಂದ ಸಾಮಾನ್ಯ ದೃಶ್ಯವಾಗಿತ್ತು.
ಮೆಗಾ ಲಸಿಕಾ ಅಭಿಯಾನವನ್ನು ತೀವ್ರ ಗತಿಯಲ್ಲಿ ಚುರುಕುಗೊಳಿಸುವ ಉದ್ದೇಶದಿಂದ ತಹಶೀಲ್ದಾರರು ತಾಲೂಕಿನ ಗ್ರಾಮ ಪಂಚಾಯಿತಿ ಮತ್ತು ಸಿರುಗುಪ್ಪ ನಗರ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ,
ಆದರೆ ನೋಡಲ್ ಅಧಿಕಾರಿಗಳು ಲಸಿಕೆ ಅಭಿಯಾನ ನಡೆಯುವ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸದ ಕಾರಣ ಕೆಲವುಕಡೆ ಲಸಿಕಾ ಅಭಿಯಾನ 11-00 ಗಂಟೆಯ ನಂತರ ಆರಂಭವಾಯಿತು.

Share and Enjoy !

Shares