ವಿಜಯನಗರ ವಾಣಿ ಸುದ್ದಿ ಸಿರುಗುಪ್ಪ
ಸಿರುಗುಪ್ಪ:ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ರಾಜ್ಯದ ಕಾರ್ಮಿಕ ಇಲಾಖೆಯ ಮಹಾತ್ವಕಾಂಕ್ಷಿ ಯೋಜನೆಯಾದ “ಇ-ಶ್ರಮ್ ತಂತ್ರಾಂಶ” ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ನೋಂದಣಿ ಇ-ಶ್ರಮ್ ಕಾರ್ಡ್ ವಿತರಣೆ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಒಕ್ಕೂಟ ಬೆಂಗಳೂರು ಹಾಗೂ ಸಿರುಗುಪ್ಪ ತಾಲೂಕು ಘಟಕ ವತಿಯಿಂದ ರಾವಿಹಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈಸಂದರ್ಭದಲ್ಲಿ ಗ್ರಾಮದ ಸಮಾಜ ಸೇವಕ ಶಿವರಾಜ್ ಮಾತನಾಡಿ ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆಯೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರಕುವಂತಾಗಬೇಕು, ಆರ್ಥಿಕತೆಯ ಪಿರಮಿಡ್ಡಿನ ತಳಹದಿಯಾಗಿರುವ ಅಸಂಘಟಿತ ಕಾರ್ಮಿಕರೇ ದೇಶದ ಶಕ್ತಿ, ಆದ್ದರಿಂದ ದೇಶದಲ್ಲಿ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರಿದ್ದು, ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರು ಬೀದಿ ಬದಿ ವ್ಯಾಪಾರಿಗಳು ಗೃಹಕಾರ್ಮಿಕರ ಮುಂತಾದ ಅಸಂಘಟಿತ ವಲಯದಲ್ಲಿ ದುಡಿಯುವ ವರ್ಗಗಳನ್ನು ಒಂದೇ ವೇದಿಕೆಯಡಿ ತರುತ್ತಿರುವುದು ಮಹತ್ವದ ಕಾರ್ಯ. ಅಸಂಘಟಿತ ಕಾರ್ಮಿಕರಿಗೆ ಯೋಜನೆಗಳ ಲಾಭ ದೊರಕಿಸಿಕೊಡುವುದು ಕೂಡ ಈ ಯೋಜನೆ ಉದ್ದೇಶವಾಗಿದೆ, ಇ- ಶ್ರಮ ಯೋಜನೆ ಅಡಿಯಲ್ಲಿ ನೊಂದಾಣಿ ಪಡೆಯುವ ಪ್ರತಿ ಅಸಂಘಟಿತ ಕಾರ್ಮಿಕರಿಗೆ 2 ಲಕ್ಷ ರೂ ಅಪಘಾತ ವಿಮೆ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುತ್ತದೆ. ಗ್ರಾಮದ ಅಸಂಘಟಿತ ಕಾರ್ಮಿಕರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
“ಇ-ಶ್ರಮ್ ತಂತ್ರಾಂಶ” ಯಲ್ಲಿ ನೋಂದಣಿಯಾದ ಗ್ರಾಮದ ಅಸಂಘಟಿತ ಕಾರ್ಮಿಕರಿಗೆ ಕಾರ್ಡುಗಳನ್ನು ವಿತರಿಸಲಾಯಿತು.. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ, ಕೇಶಪ್ಪ ನಾಯಕ್, ಜಯರಾಮ್, ರಾಕೇಶ್ ವೀರೇಶ್ ಹಾಗೂ ಗ್ರಾಮದ ಅಸಂಘಟಿತ ಕಾರ್ಮಿಕರು ಹಾಜರಿದ್ದರು.