ವಿಜಯನಗರ ವಾಣಿ ಸುದ್ದಿ ರಾಯಚೂರು
ರಾಯಚೂರು,:-ಕೃಷಿ ವಿಶ್ವವಿದ್ಯಾಲಯ ಸಂಶೋಧನೆಗಳು ಕೇವಲ ಪ್ರಯೋಗಾಲಯದಲ್ಲಿ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ರೈತರ ಜಮೀನುಗಳಿಗೆ ತಲುಪುವಂತೆ ಮಾಡಬೇಕಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಯಚೂರು, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಜಿಲ್ಲಾ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ಸಂವಾದ ಸಭೆಯನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಎಫ್.ಕೆ.ಸಿ.ಸಿ.ಐ ಮತ್ತು ರೋಬೋಟ್ ತಂತ್ರಜ್ಞಾನದ ಮೂಲಕ ಏಳು ಕ್ಷೇತ್ರಗಳಲ್ಲಿ 17ಕೋಟಿ ರೂ. ವೆಚ್ಚದ ತಂತ್ರಜ್ಞಾನ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗಿದೆ. ರೈತರ ಕೃಷಿತಂತ್ರಜ್ಞಾನ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದದಲ್ಲಿ ವಾಣಿಜ್ಯೋದ್ಯಮ ಸಂಶೋಧನೆ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಸರಕಾರ ಕೃಷಿ ಹೊಂಡ ಕೃಷಿಕರಿಗೆ ಹಾಗೂ ವಿದ್ಯುತ್ ರೈತ ಮಿತ್ರ ಸೇರಿದಂತೆ ರೈತರ ಅಭಿವೃದ್ಧಿಗೆ ಬೇಕಾದ ಸಾಪ್ಟವೇರ್ ಅಭಿವೃದ್ಧಿ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಎಫ್.ಕೆ.ಪಿ.ಸಿ.ಸಿ.ಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಅವರು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಹಲವು ಸಂಶೋಧನೆಗಳನ್ನು ಕೈಗೊಂಡು ರೈತರಿಗೆ ಬೇಕಾದ ವಿದ್ಯುತ್ ಉಚಿತವಾಗಿ ಕಲ್ಪಿಸುವಂತೆ ಹಾಗೂ ರೈತರಿಗೆ ಬೇಕಾದ ಕೋಲ್ಡ್ ಸ್ಟೋರೆಜ್ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಾಪಿಸುವಂತೆ ಹಾಗೂ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿಹೊಂಡ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಸರಕಾರದ ವತಿಯಿಂದ ಕೃಷಿ ಹೊಂಡ ನಿರ್ಮಾಣ ಮಾಡಬೇಕು ಎನ್ನುವ ಸಲಹೆಯನ್ನು ನಮ್ಮ ಸಂಸ್ಥೆ ಸಕಾರ‍್ಕಕೆ ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ ಕಟ್ಟಿಮನಿ ಅವರು ರೈತರು ಸಂಕಷ್ಟದಲ್ಲಿದ್ದು ಅವರ ಆದಾಯವನ್ನು ದ್ವಿಗುಣಗೊಳಿಸುವ ನಿಟದಟ್ಟಿನಲ್ಲಿ ವಿಶ್ವವಿದ್ಯಾನಿಲಯ ಈ ಭಾಗದ ರೈತರಿಗೆ ಬೇಕಾದ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಸಂಶೋಧನೆಗಳು ಮಾಡುತ್ತಿದೆ ಈಗಾಗಲೇ ಕಲ್ಬುರ್ಗಿಯ ತೊಗರಿ ಬೆಳೆಗೆ ಜಿಐ ಟ್ಯಾಗ್ ನೀಡಲಾಗಿದೆ.
ಈ ಭಾಗದ ತುಂಗಭದ್ರಾ ಸೋನಾಮಸೂರಿಗೆ ಕೆಎ ಟ್ಯಾಗ್ ಕಲ್ಪಿಸಲು ಚಿಂತನೆ ಮಾಡಲಾಗುತ್ತಿದೆ. ರಾಯಚೂರು ಕೃಷಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಮತ್ತು ಬೋಧಕರ ಅನುಪಾತದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದು, ಈಗಾಗಲೇ ರಾಷ್ಟ್ರಮಟ್ಟದಲ್ಲಿ 76 ವಿಶ್ವವಿದ್ಯಾಲಯಗಳ ಪೈಕಿ 28ನೇ ಸ್ಥಾನ ಪಡೆಯುವ ಮೂಲಕ ರಾಯಚೂರು ಕೃಷಿ ವಿಶ್ವವಿದ್ಯಾಲಯ ಗರಿಮೆಯನ್ನು ಮೆರೆದಿದೆ ಎಂದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಈ ಭಾಗದ ರೈತರು ಭತ್ತದ ಬೆಳೆಯಬೇಕಾಗಿದೆ. ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದು ಕೃಷಿ ವಿಶ್ವವಿದ್ಯಾಲಯ ಕಡಿಮೆ ನೀರು ಬಳಕೆ ಮೂಲಕ ಹೆಚ್ಚು ಆದಾಯ ಬೆಳೆಯುವ ಬೆಳೆಗಳನ್ನು ಸಂಶೋಧಿಸುವ ಮೂಲಕ ಈ ಭಾಗದ ರೈತರಿಗೆ ಸಹಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಈ ವೇಳೆ ಆರ್.ಡಿ.ಸಿ.ಸಿ.ಐ ಅಧ್ಯಕ್ಷ ಹಾಗೂ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನೆಯು ಸದಸ್ಯರು ತ್ರಿವಿಕ್ರಮ್ ಜೋಶಿ, ವ್ಯವಸ್ಥಾಪನ ಮಂಡಳಿಯ ಸದಸ್ಯ ಮಹಾಂತೇಶ ಗೌಡ ಬಿ. ಪಾಟೀಲ್ ಇನ್ನೋರ್ವ ಸದಸ್ಯ ಶ್ರೀಧರ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.