ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಎಂ ಗೃಹ ಕಚೇರಿ‌ ಕೃಷ್ಣಾ ಬಳಿ ಮರಾಠಾ ಸಮಾಜದ ಮುಖಂಡರು ಜಮಾಯಿಸಿದ್ರು. ಕೇಸರಿ ಟೋಪಿ‌‌ ಧರಿಸಿದ್ದ ಕಾರ್ಯಕರ್ತರುಶ್ರೀಮಂತ್ ಪಾಟೀಲ್ ಪರ ಘೋಷಣೆ ಕೂಗಿದ್ರು.

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ ಬೆಂಗಳೂರು  ಜಿಲ್ಲೆ

ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ ಅಧ್ಯಕ್ಷ ಶ್ಯಾಮ್ ಸುಂದರ್ ಗಾಯಕ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿದ್ರು. 

ಚಿಕ್ಕೋಡಿಯ ಕ್ಷತ್ರಿಯ ಮರಾಠಾ ಮಾಹಾ ಒಕ್ಕೂಟದ ಅಧ್ಯಕ್ಷ ಬಿಬಿ ಜಾಧವ್, ಅಥಣಿಯ ಶಿವ ಪ್ರತಿಷ್ಟಾನ ಅಧ್ಯಕ್ಷ ಸಿದ್ದು ಬಿ.ಪಾಟೀಲ್, ಅಥಣಿ ತಾಲೂಕಿನ ಕ್ಷತ್ರಿಯ ಮರಾಠಾ ಮಹಾಸಭಾದ ಅಧ್ಯಕ್ಷ     ವಿನಾಯಕ್ ದೇಸಾಯಿ, ಬಾಳಾ ಸಾಹೇಬ್ ಪಾಟೀಲ್ ಮಲ್ಲಿಕವಾಡ್, ವಕೀಲ ಬಿ.ಆರ್,ಯಾದವ್, ಔರಾದ್ ನ ಪದ್ಮಾಕರ್ ಪಾಟೀಲ್, ಜಮಖಂಡಿಯ ಶ್ರೀಕಾಂತ್ ಮುಧೋಳ, ಸುನೀಲ್ ಶಿಂಧೆ, ಮನೋಹರ್ ಸಾಳುಂಕೆ, ಸುಧಾಕರ್ ಭಗತ್, ಪ್ರಫುಲ್ ಧೊರುಸೆ, ಆರ್.ಎಂ.ಪಾಟೀಲ್,  ದಿಲೀಪ್ ಪವಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ರು.

ಶ್ರೀಮಂತ್ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಮರಾಠಾ ಸಮುದಾಯವನ್ನು3ಬಿ ಯಿಂದ 2ಎಗೆ ಸೇರ್ಪಡೆ ಮಾಡಬೇಕು, ಮರಾಠ ಅಭಿವೃದ್ಧಿ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು, ಮತ್ತು ಚಿತ್ರದುರ್ಗ ಜಿಲ್ಲೆಯ ಹೊದಿಗೆರೆಯಲ್ಲಿರು ಶಹಜಿ ಮಹರಾಜರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡುವಂತೆ ಸಿಎಂಗೆ ಒತ್ತಾಯಿಸಿದ್ರು. 

ಸಿಎಂ ಜೊತೆ ಮರಾಠ ಸಮಾಜದ ಮುಖಂಡರ ಸಭೆ ನಡೆಯುತ್ತಿದ್ದ ವೇಳೆ ಕೇಸರಿ ಟೋಪಿ ಧರಿಸಿದ್ದ ಮರಾಠ‌ ಸಮಾಜದವರು ಶಕ್ತಪ್ರದರ್ಶನ ತೋರಿದ್ರು, ಜೈ ಭವಾನಿ, ಜೈ ಶಿವಾಜಿ ಘೋಷಣೆಗಳನ್ನು ಕೂಗಿದ್ರು, ಶ್ರೀಮಂತ್ ಪಾಟೀಲ್ ಪರ ಜೈಕಾರದ ಘೋಷಣೆ ಕೇಳಿ‌ ಬಂತು, 

ಸಭೆ ಬಳಿಕ ಆಗಮಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಸುತ್ತುವರಿದ ಮರಾಠಾ ಸಮಾಜದ ಮುಖಂಡರು ತಿಂಗಳ ಒಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ರು. ಮುಖಂಡರ ಮನವಿಗೆ ಒಪ್ಪಿದ ಸಿಎಂ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ರು.

ಒಟ್ಟಾರೆ ಮೂರು ಮುಖ್ಯ ಬೇಡಿಕೆಗಳನ್ನಿಟ್ಟು ಸಿಎಂ ಗೃಹ ಕಚೇರಿಗೆ ಆಗಮಿಸಿದ್ದ ಮರಾಠ ಮುಖಂಡರ ಗುಂಪು ಕೇಸರಿಮಯವಾಗಿ ಕಂಗೊಳಿಸಿತ್ತು

 

Share and Enjoy !

Shares