ಹೆಚ್.ವೀರಾಪುರದಲ್ಲಿ ಜೆಜೆಎಂ ಕಾಮಗಾರಿ ಕಳಪೆ : ಜನತೆಗೆ ಅಶುದ್ಧ ನೀರೇ ಗತಿ.!

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ ಕುರುಗೋಡು

ಕುರುಗೋಡು. ಸೆ.3ಗ್ರಾಮೀಣ ಭಾಗದ ಜನತೆಗೆ ಶುದ್ದ ಕುಡಿಯುವ ನೀರು ಒದಗಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯ ಜೆಜೆಎಂ ಯೋಜನೆ ಕಾಮಗಾರಿ ಕಳೆಪೆಯಿಂದಾಗಿ ಹಳ್ಳ ಇಡಿತಾ ಎಂಬ ಪ್ರಶ್ನೆ ಮೂಡುವಂತಾಗಿದೆ.

ಹೌದು..! ತಾಲೂಕು ಸಮೀಪದ ಹೆಚ್.ವೀರಾಪುರ ಗ್ರಾಪಂಯಲ್ಲಿ ಇತ್ತೀಚೆಗೆ ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು ಕೋಟ್ಯಾಂತರ ರೂ.ಗಳ ವೆಚ್ಚದ ಕಾಮಗಾರಿಗೆ ಚಾಲನೆ ದೊರೆತು ಕೆಳ ದಿನದಲ್ಲಿ ಕಾಮಗಾರಿಯು ಕಳಪೆಯಿಂದ ಕೂಡಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. 

ಸರ್ಕಾರಗಳು ಕೋಟ್ಯಾಂತರ ಅನುದಾನಗಳನ್ನು ವಿವಿಧ ಯೋಜನೆಗಳ ಮೂಲಕ ಗ್ರಾಮಗಳ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಮುಂದಾದರೂ, ಗುತ್ತಿಗೆದಾರರ ಕಳಪೆ ಕಾಮಗಾರಿಗೆ ಜನರಿಗೆ ತಲುಪಬೇಕಾಗಿದ್ದು ಯೋಜನೆಗಳು ನೀರಿನಲ್ಲಿ ಹುಂಚೆಣ್ಣು ತೊಳೆದಂತಾಗಿದೆ.

ಇಲ್ಲಿನ ಹೆಚ್.ವೀರಾಪುರ ಗ್ರಾಮದ ಪ್ರತಿ ಮನೆ ಮನೆಗೆ ಜೆಜೆಎಂ ಯೋಜನೆಯಡಿ ಶುದ್ದ ಕುಡಿಯುವ ನೀರು ಪೂರೈಯಿಸುವ ಯೋಜನೆಯ ಕಳಪೆಯಿಂದಾಗಿ ಹಲವು ವಿಘ್ನಗಳು ಎದುರಾಗುವ ಜತೆಗೆ ಜನತೆಗೆ ಅಶುದ್ಧ ನೀರೇ ಗತಿ ಅನ್ನುವಂತಾಗಿದೆ. 2020-21ನೇ ಸಾಲಿನ ಜೆಜೆಎಂ ಯೋಜನೆಯಡಿ ಸುಮಾರು 2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದ್ದರು. ಕಾಮಗಾರಿ ಇನ್ನೇನು ಗುಣಮಟ್ಟದೊಂದಿಗೆ ಗ್ರಾಮದ ಜನತೆಗೆ ನೀರು ಒದಗಿಸಬಹುದು ಎಂಬುದಕ್ಕೆ ತಣ್ಣೀರು ಎರಚಿದಂತಾಗಿದೆ. ಗ್ರಾಮದಲ್ಲಿ ಕೇವಲ ಎರಡು ವಾರ್ಡ್ಗಳಲ್ಲಿ ಮಾತ್ರ ಕಾಮಗಾರಿ ನಡೆಯುತ್ತಿದೆ. ಇನ್ನೂ ಗ್ರಾಮದ ಉಳಿದ ವಾರ್ಡ್ಗಳಲ್ಲಿ ಕಾಮಗಾರಿ ನಡೆಯಬೇಕಾಗಿದೆ. ಗ್ರಾಮದ ಬೀದಿಗಲ್ಲಿ ಪೈಪ್ ಲೈನ್ ಅಳವಡಿಸಿ, ಮುಚ್ಚದೇ ಹಾಗೇ ಬಿಟ್ಟಿರುವುದು, ಪೈಪ್ ಲೈನ್ ಅಗೆದ ಗುಂಡಿಗಳನ್ನು ಸಹ ಮುಚ್ಚಿಲ್ಲ. ಪೈಪ್ ಲೈನ್ಗಳನ್ನು ಮುಚ್ಚದೇ ಹೊರಗಡೆ ಹಾಗೇ ಬಿಟ್ಟಿರುವುದು ಕಂಡು ಬಂತು. ಕೆಲವು ಹಾಕಿರುವ ನಲ್ಲಿ ಹಾಗೂ ಮೀಟರ್ ಬಾಕ್ಸ್ ಗಳು ಒಡೆದು ಹೋಗಿವೆ. ನಲ್ಲಿ ಅಕ್ಕಪಕ್ಕದಲ್ಲಿ ಹಾಕಿದ ಕಾಂಕ್ರೀಟ್‌ ಬಿರುಕು ಬಿಟ್ಟಿರುವುದು, ಹಾಕಿರುವ ನಲ್ಲಿಗಳು ಸಹ ಗುಣಮಟ್ಟದಿಲ್ಲವೆಂಬ ಆರೋಪವಿದೆ. ಹೀಗೆ ಹಲವು ಸಮಸ್ಯೆಗಳೊಂದಿಗೆ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಇಂತಹ ಯೋಜನೆಗಳು ಹಳ್ಳ ಹಿಡಿದರೆ, ಗ್ರಾಮೀಣ ಭಾಗದ ಜನತೆಗೆ ಸೌಕರ್ಯಗಳನ್ನು ಒದಗುವೊದಾದರೆ ಹೇಗೆ?. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಕಳಪೆ ಕಾಮಗಾರಿಗೆ ನಾಂದಿಯಾಗಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮದ ಜತೆಗೆ ಇಲ್ಲಿನ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಕ್ರಮವಹಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಹೇಳಿಕೆ :ಹೆಚ್.ವೀರಾಪುರ ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಂನ ಶುದ್ಧ ಕುಡಿಯುವ ನೀರು ಪೂರೈಕೆಯ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ಆರಂಭದ ಹಂತದಲ್ಲಿಯೇ ಗುಣಮಟ್ಟವಲ್ಲದ ಪೈಪ್ ಲೈನ್ ಅಳವಡಿಸಲಾಗಿದೆ. ಮತ್ತು ಹಾಕಿರುವ ನಲ್ಲಿಗಳು ಸಹ ಕಿತ್ತಿ ಬರುತ್ತಿವೆ. ವಾರ್ಡ್ಗಳಲ್ಲಿ ಅಗೆದ ಕುಣಿಗಳಲ್ಲಿ ಬೇಕಾಬಿಟ್ಟಿ ಎಂಬಂತೆ ಪೈಪ್ ಲೈಪ್ ಅಳವಡಿಸಿ ಕೈತೊಳೆದುಕೊಂಡಿದ್ದು, ಇದರಿಂದ ಬೀದಿಗಳಲ್ಲಿ ಜನರು ಸಂಚರಿಸಲು ತೊಂದರೆ ಉಂಟಾಗಿದೆ. ಕೋಟ್ಯಾನುಗಟ್ಟಲೆಯ ಕಾಮಗಾರಿಯು ಹಳ್ಳ ಹಿಡಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಿ, ಗುತ್ತಿಗೆದಾರರ ವಿರುದ್ಧ ಶಿಸ್ತಿನ ಕ್ರಮ ಜತೆಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಕ್ರಮಕೈಗೊಳ್ಳಬೇಕು. ದುರುಗಪ್ಪ,  ಕರ್ನಾಟಕ ದಲಿತ ಸಂಘರ್ಷ ಸಮಿತಿ ಎನ್. ಮೂರ್ತಿ ಬಣ ತಾಲೂಕು ಅಧ್ಯಕ್ಷರು.

 

Share and Enjoy !

Shares