2023ರ ವಿಧಾನಸಭೆ ಚುನಾವಣೆಯಲ್ಲಿಯು ಸಿರುಗುಪ್ಪ ಕ್ಷೇತ್ರಕ್ಕೆ ಬಿಜೆಪಿಗೆಲವು ಖಚಿತ: ಎಮ್ ಎಸ್ ಸಿದ್ದಪ್ಪ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ಕುರುಗೋಡು.2023 ವಿಧಾನಸಭಾ ಚುನಾವಣೆ ಯಲ್ಲಿ ಕೂಡ ಭತ್ತದನಾಡು ಸಿರುಗುಪ್ಪದಲ್ಲಿ ಬಿಜೆಪಿ ಮೇಲಗೈ ಸಾದಿಸುವದರಲ್ಲಿ ಯಾವುದೇ ಅನುಮಾನ ವಿಲ್ಲ ಎಂದುಬಿಜೆಪಿ ಯುವಮೋರ್ಚಾ ಸಿರುಗುಪ್ಪ ತಾಲೂಕು ಅಧ್ಯಕ್ಷ ಎಂ. ಎಸ್. ಸಿದ್ದಪ್ಪ ಹೇಳಿದರು.

ಸಮೀಪದ ಮಣ್ಣೂರು ಗ್ರಾಮದಲ್ಲಿ ಶ್ರೀ ಗುರುಪಾದಪ್ಪ ತಾತನನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅನೇಕ ಅಭಿವೃದ್ಧಿಗಳು ಮಾಡಿ ಜೊತೆಗೆ ಜನಪರ ಆಡಳಿತ ನಡೆಸಿದೆ ಈ ನಿಟ್ಟಿನಲ್ಲಿಕೂಡ ಸಿರುಗುಪ್ಪ ತಾಲೂಕಿನ ಸುತ್ತಮುತ್ತ ಸರಕಾರ ದಿಂದ ಅತಿಹೆಚ್ಚು ಅನುದಾನ ಬಿಡುಗಡೆ ಗೊಳಿಸಿ ಅಭಿವೃದ್ಧಿಯ ಪಥದತ್ತ ಸಾಗಿಸಲಾಗಿದೆ. ಆದ್ದರಿಂದ 2023 ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಗೆ ಜನರು ಬೆಂಬಲಿಸಿದ್ದಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.

ನಂತರ ಗ್ರಾಪಂ ಸದಸ್ಯ ಗಾಧಿಲಿಂಗಪ್ಪ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ನಿರ್ಗತಿಕರಿಗೆ, ಕಡು ಬಡವರಿಗೆ, ಸಾವಿರಾರು ಕೂಲಿ ಕಾರ್ಮಿಕರಿಗೆ ಎಂ. ಎಸ್. ಸಿದ್ದಪ್ಪ ಅವರು ಆಹಾರ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ  ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವಲ್ಲಿ ನಿರತಾರಾಗಿದ್ದಾರೆ.  ಇನ್ನೂ ಬಹಳ ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಗಳು ಸ್ಥಗಿತ ಗೊಂಡಿದ್ದವು ಅಂತಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಇವತ್ತು ಬಸ್ ಸೌಕರ್ಯ ಗಳು ಸುಗಮವಾಗಿ ಹೊಡಡುತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಇನ್ನೂ ಮುಖ್ಯವಾಗಿ ಸಿರುಗುಪ್ಪ ತಾಲೂಕಿನ ಯುವಕರಲ್ಲಿಮುಂದಿನ  ಶಾಸಕ ಎಂ.ಎಸ್.ಸಿದ್ದಪ್ಪ ಎಂಬ ಸುದ್ದಿ ಎಲ್ಲಂದರಲ್ಲಿ ವ್ಯಾಪಾಕವಾಗಿ ಕೇಳಿ ಬರುತ್ತಿದೆ. ಆದ್ದರಿಂದ ಬಿಜೆಪಿ ನಾಯಕರು ಮುಂದಿನ ಶಾಸಕರ ಚುನಾವಣೆ ಗೆ ಸಿದ್ದಪ್ಪ ಅವರಿಗೆ ಟಿಕೆಟ್ ನೀಡಬೇಕು. ಗೆಲವುದು ಮಾತ್ರ ನಿಶ್ಚಿತ ಯಾವುದೇ ಅನುಮಾನ ವಿಲ್ಲ  ಎಂದು ಒತ್ತಾಯಿಸಿದರು.

ಪ್ರಾರಂಭದ ದೇವಸ್ಥಾನದಲ್ಲಿ ಬೆಳಿಗ್ಗೆ ಯಿಂದ ಸಂಜೆ ವರೆಗೆ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಭಜನೆ ಕಾರ್ಯಕ್ರಮ ನಡೆದವು ನಂತರ ಗಂಗೆಸ್ಥಳಕ್ಕೆ ತೆರಳಿ ಗಂಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Share and Enjoy !

Shares