ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ : ಹೊಸಗೌಡ್ರು

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ ರಾಯಚೂರು

ಲಿಂಗಸುಗೂರು : ಕ್ರೀಡೆ ಗ್ರಾಮೀಣ ಭಾಗದ ಸೂಡಗು ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಬಹಳ ಮಹತ್ವ ಪಡೆದಿದೆ ಕ್ರೀಡೆಯಿಂದ ದೈಹಿಕ ಸಾಮರ್ಥ್ಯವನ್ನು ಹೆಚ್ಚಳ ಮಾಡುತ್ತದೆ ಎಂದು ಕಾಳಾಪೂರ  ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ್ ಹೊಸಗೌಡ್ರು  ಅಭಿಪ್ರಾಯಪಟ್ಟರು.

ಲಿಂಗಸುಗೂರು ತಾಲೂಕಿನ ಸುಕ್ಷೇತ್ರ ಐದನಾಳ ಗ್ರಾಮದ ಷ. ಬ್ರ. ಬಸಲಿಂಗ ಶಿವಯೋಗಿ ಮಠದಲ್ಲಿ ಪ್ರತಿ  ವರ್ಷದಂತೆ  ಈ ವರ್ಷವು ಕೂಡ 39 ನೇ ಶ್ರೀ ವೀರಭದ್ರೇಶ್ವರ ಮಹಾತ್ಮೆ ಮಹಾಪುರಾಣ ಪ್ರಾರಂಭೋತ್ಸವ ಹಾಗೂ ಮಹಾ ಮಂಗಲೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.

ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಮಾರುತೇಶ್ವರ ಗುಂತಗೋಳ ತಂಡ. ದ್ವಿತೀಯ ಬಹುಮಾನ ಚಾಮುಂಡೇಶ್ವರಿ ಹುನಗುಂದ. ತೃತೀಯ ಬಹುಮಾನ ಸೋಮನಾಥೇಶ್ವರ ಕಕ್ಕೇರಾ ನಾಲ್ಕನೇ ಬಹುಮಾನ  ಲೋಕಲ್ ಬಾಯ್ಸ್ ಕೋಮಲಾಪುರು ತಂಡ  ಪಡೆದುಕೊಂಡವು. 

ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಮರೇಶ ನಾಡಗೌಡ್ರ ಮತ್ತುರುದ್ರಗೌಡ ಮಾಲಿಪಾಟೀಲ್ ಶಂಕ್ರಣ್ಣ ಕೋಟೆ ಸಂಗಣ್ಣ ಹೂಗಾರ್  ಅಮರೇಗೌಡ ಪಗಾದ  ವಿರೇಶ ಕಾಳ್ಳಿಮಠ  ಭೀಮಣ್ಣ ಸುರೇಶ್ ಸುಗರಡ್ಡಿ ಕಂಟೆಪ್ಪ ಕಕ್ಕೇರಿ  ರುದ್ದಯ್ಯ ಸ್ವಾಮಿ  ಅಮರಪ್ಪ ಕಕ್ಕೇರಿ  ಅಮರೇಶ  ಸೇರಿದಂತೆ ಮುಂತಾದವರು ಇದ್ದರು.

Share and Enjoy !

Shares