ಹಟ್ಟಿಚಿನ್ನದಗಣಿ :ಹಟ್ಟಿ ಸಮೀಪದ ರೋಡಲಬಂಡ(ತ) ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನೆಡೆಯಿತು. 19 ಸದಸ್ಯರ ಬಲದಲ್ಲಿ ಓರ್ವ ಸದಸ್ಯ ಮೃತನಾಗಿದ್ದರಿಂದ 18 ಜನರ ಸದಸ್ಯರು ಹಾಜರಿದ್ದರು ಎಸ್ ಟಿ ಮಹಿಳೆಗೆ ವೀಸಾಲಾದ ಅಧ್ಯಕ್ಷಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಯಂಕಮ್ಮ ವಂದ್ಲೆಪ್ಪ ಹಾಗೂ ಮಂಜುಳಾ ವೀರನಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಸಿದ್ದಣ ಬಸಣ್ಣ ಹಾಗೂ ಬಿಜೆಪಿ ಬೆಂಬಲಿತ ಪವಿತ್ರಾ ಬಸವರಾಜ್ ನಾಮಪತ್ರ ಸಲ್ಲಿಸಿದ್ದರು.
ಗೌಪ್ಯ ಮತದಾನ ಮಾಡಿದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 9 ಮತಗಳಿಂದ ಸಮಬಲ ಹೊಂದಿದ ಕಾರಣ ಚೀಟಿ ಎತ್ತುವ ಮೂಲಕ ಯಂಕಮ್ಮ ವಂದ್ಲೆಪ್ಪ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸಿದ್ದಣ ಬಸಣ್ಣ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾದ ತಹಸೀಲ್ದಾರ್ ಚಾಮರಾಜ್ ಪಾಟೀಲ್ ಘೋಷಿಸಿದರು.ಕಂದಾಯ ನಿರೀಕ್ಷಕ ರಾಘವೇಂದ್ರ, ಪಿಡಿಓ ತೇಜಸ್, ಗ್ರಾ.ಪಂ.ಸಿಬ್ಬಂದಿಗಳಾದ ಭೀಮರಾಯ ಮುಷ್ಠುರು, ಕಾಂಗ್ರೇಸ್ ಯುವ ಮುಂಖಡ ರಾಮನಗೌಡ ಸಿದ್ದು ಜಾಲಹಳ್ಳಿ ಗುಂಡಪ್ಪ ಚಲುವಾದಿ, ಸೋಮಶೇಖರ ದೇಸಾಯಿ, ಈರಪ್ಪ, ಬಸನಗೌಡ, ಇದ್ದರು. ಸಿಪಿಐ ಮಹಾತೇಶ ವಿ ಸಜ್ಜನ್, ಪಿಎಸೈ ಪ್ರಕಾಶರೆಡ್ಡಿ ಡಂಬಳ, ಹಟ್ಟಿ ಠಾಣೆಯ ಎಎಸ್‍ಐ ಹನುಮಂತರಾಯ, ಲಿಂಗನಗೌಡ, ಹುಚ್ಚರೆಡ್ಡಿ, ಪೊಲೀಸ್ ಇಲಾಖೆ ಬಿಗಿ ಭದ್ರತೆಯಲ್ಲಿ ಚುನಾವಣೆ ಆಯ್ಕೆ ನಡೆಯಿತು.