ವಿಜಯನಗರ ವಾಣಿ ಸುದ್ದಿ ಬಳ್ಳಾರಿ
ಬಳ್ಳಾರಿ:-2021-22ನೇ ಸಾಲಿನ ಬಳ್ಳಾರಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ನಗರದ ಬಿಡಿಎಎ ಫುಟ್‍ಬಾಲ್ ಮೈದಾನದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕಿರಿಯ ಪ್ರಾಥಮಿಕ ವಿಭಾಗದಿಂದ 9 ಜನರು, ಹಿರಿಯ ಪ್ರಾಥಮಿಕ ವಿಭಾಗದಿಂದ 09 ಮತ್ತು ಪ್ರೌಢಶಾಲಾ ವಿಭಾಗದಿಂದ 09 ಜನ ಶಿಕ್ಷಕರು ಸೇರಿದಂತೆ ಒಟ್ಟು 27 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ.
*ಕಿರಿಯ ಪ್ರಾಥಮಿಕ ವಿಭಾಗ: ಬಳ್ಳಾರಿ ತಾಲೂಕಿನ ಡಿ ಕಗ್ಗಲ್ ಸಹಿಪ್ರಾ ಶಾಲೆಯ ಸಹ ಶಿಕ್ಷಕ ಅನಂತಕುಮಾರ,ಕುರುಗೋಡು ತಾಲೂಕಿನ ಹರಗಿನಡೋಣಿಯ ಸಹಿಪ್ರಾ ಶಾಲೆಯ ಸಹ ಶಿಕ್ಷಕರಾದ ಎಂ.ಆರ್.ವನಜಾಕ್ಷಮ್ಮ, ಸಂಡೂರಿನ ಸಿದ್ದರಾಮೇಶ್ವರ ಬಡಾವಣೆ ಯಶವಂತನಗರದ ಸಕಿಪ್ರಾ ಶಾಲೆಯ ಸೌಮ್ಯ.ಕೆ.ಆರ್, ಸಿರುಗುಪ್ಪದ ವರಮಯ್ಯ ಕ್ಯಾಂಪ್‍ನ ಸಕಿಪ್ರಾ ಶಾಲೆಯ ಸಹ ಶಿಕ್ಷಕ ರಮೇಶ ನಾಯಕ, ಹೊಸಪೇಟೆಯ ಹೊಸಮಲಪನಗುಡಿ ಸಹಿಪ್ರಾ ಶಾಲೆಯ ಸಹಶಿಕ್ಷಕಿ ದೇವಕ್ಕ, ಕೂಡ್ಲಿಗಿ ತಾಲೂಕಿನ ತಿಮ್ಮಲಾಪುರ ಹಳೆ ತಾಂಡದ ಸಕಿಪ್ರಾ ಶಾಲೆಯ ಸಹ ಶಿಕ್ಷಕ ಕೊಟ್ರೇಶ.ಎ, ಹಗರಿ ಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ಹೆಗ್ಡೆಹಾಳ್ ಸಹಿಪ್ರಾ ಶಾಲೆಯ ಸಹ ಶಿಕ್ಷಕಿ ಜಿ.ಪುಷ್ಪಾವತಿ, ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಸಹಿಪ್ರಾ ಶಾಲೆಯ ಸಹ ಶಿಕ್ಷಕ ವಿ.ಜಿ.ಆಗ್ರಹಾರ, ಹರಪನಹಳ್ಳಿ ತಾಲೂಕಿನ ತಾಳೇದಹಳ್ಳಿ ಸಹಿಪ್ರಾ ಶಾಲೆಯ ಸಹ ಶಿಕ್ಷಕಿ ಎಂ.ಭಾರತಿ.
*ಹಿರಿಯ ಪ್ರಾಥಮಿಕ ವಿಭಾಗ: ಬಳ್ಳಾರಿ ತಾಲೂಕಿನ ಕಮ್ಮರಚೇಡು ಸಹಿಪ್ರಾ ಶಾಲೆಯ ಮಲ್ಲಮ್ಮ (ಬಡ್ತಿ ಮು.ಗು), ಕುರುಗೋಡು ತಾಲೂಕಿನ ಬಸವಪುರ ಸಹಿಪ್ರಾ ಶಾಲೆಯ ಸಿ.ಪರಮೇಶ್ವರ, (ಬಡ್ತಿ ಮು.ಗು), ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಸಹಿಪ್ರಾ ಶಾಲೆಯ ಹೆಚ್.ತಿಪ್ಪಯ್ಯ (ಮು.ಗು), ಸಿರುಗುಪ್ಪ ಕೆಹೆಚ್‍ಬಿ ಕಾಲೋನಿಯ ಸಹಿಪ್ರಾ ಶಾಲೆಯ ಖಾದರ್ಬೀ (ಮು.ಗು), ಹೊಸಪೇಟೆ ಕಬ್ಬೇರ್ಪೇಟೆ ಬಿಆರ್ಸಿಎಸ್ ಸಹಿಪ್ರಾ ಶಾಲೆಯ ಸಹ ಶಿಕ್ಷಕ ಜೀವರಾಜ, ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಸಹಿಪ್ರಾ ಶಾಲೆಯ ಸಹ ಶಿಕ್ಷಕ ಟಿ.ರಾಮಾಂಜನೇಯ, ಹಳೇ ಹಗರಿಬೊಮ್ಮನಹಳ್ಳಿ ಸಮಾಹಿಪ್ರಾ ಶಾಲೆಯ ಸಹ ಶಿಕ್ಷಕ ಯು.ಎಸ್.ಕೊಟ್ರೇಶ್, ಹೂವಿನಹಡಗಲಿ ತಾಲೂಕಿನ ಹ್ಯಾರಡ ಸಮಾಹಿಪ್ರಾ ಶಾಲೆಯ ಸಹ ಶಿಕ್ಷಕ ಡಾ.ಯಲ್ಲಪ್ಪ ಸಣ್ಣೀಲಪ್ಪರ, ಹರಪನಹಳ್ಳಿ ತಾಲೂಕಿನ ಹಾರಕನಾಳು ಸಹಿಪ್ರಾಶಾಲೆಯ ಎಲ್.ಭೀಮಾನಾಯ್ಕ್ (ಮುಖ್ಯ ಗುರು).
*ಪ್ರೌಢಶಾಲಾ ವಿಭಾಗ: ಬಳ್ಳಾರಿ ತಾಲೂಕಿನ ಬಾಣಾಪುರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ದೇವರಾಜ.ಕೆ, ಕುರುಗೋಡು ತಾಲೂಕಿನ ಕಲ್ಲುಕಂಭ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಕೃಷ್ಣಶೆಟ್ಟಿ, ಸಂಡೂರು ತಾಲೂಕಿನ ಬಂಡ್ರಿ ಕೆಪಿಎಸ್‍ನ ಸಹ ಶಿಕ್ಷಕ ಎ.ತಿಪ್ಪೇಸ್ವಾಮಿ, ಸಿರುಗುಪ್ಪ ತಾಲೂಕಿನ ಕೆ.ಸೂಗೂರು ಸರ್ಕಾರಿ ಪ್ರೌಢಶಾಲೆ (ಆರೆಂಎಸ್‍ಎ)ಯ ಯಂಕಮ್ಮ ಜೋಷಿ ಮಾಧವಾಚಾರ, ಹೊಸಪೇಟೆಯ ಟಿ.ಬಿ.ಡ್ಯಾಂ ಸರ್ಕಾರಿ ಪ.ಪೂ. ಕಾಲೇಜಿನ ಸಹ ಶಿಕ್ಷಕ ಆರ್.ರಾಮಮೋಹನರೆಡ್ಡಿ, ಕೂಡ್ಲಿಗಿ ತಾಲೂಕಿನ ಬಡೇಲಡಕು ಸರ್ಕಾರಿ ಪ್ರೌಢಶಾಲೆಯ ಶಿವನಾಯಕ ದೊರೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಬಾಲರಾಜ ಪತ್ತಾರ, ಹೂವಿನಹಡಗಲಿ ತಾಲೂಕಿನ ಮೈಲಾರ ಟಿ.ಡಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ತಿರುಪತಿ.ಕೆ, ಹರಪನಹಳ್ಳಿ ತಾಲೂಕಿನ ಚಿಗಟೇರಿ (ಅನುದಾನಿತ ಪ್ರೌಢಶಾಲೆ) ನಾರದಮುನಿ ಪ್ರೌಢಶಾಲೆಯ ಜನಾರ್ಧನ ರೆಡ್ಡಿ.ಎಂ.ಹೆಚ್ (ದೈಶಿಶಿ).
–