ವಿಜಯನಗರ ವಾಣಿ ಸುದ್ದಿ ರಾಯಚೂರು
ಲಿಂಗಸೂಗೂರು ; ಈ ವರ್ಷ ಗಣೇಶ ಹಬ್ಬವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಸೂಕ್ತ ಸ್ಯಾನಿಟೈಜರ್ ಮತ್ತು ಸ್ಯಾನಿಟೈಜೇಶನ್ ವ್ಯವಸ್ಥೆಯೊಂದಿಗೆ ಸರ್ಕಾರದ ನಿರ್ದೇಶನದಂತೆ ಅಷ್ಟೇ ಗಾತ್ರದ ಗಣೇಶ ಪ್ರತಿಷ್ಠಾಪಿನೆ ಮಾಡಿ ಕೋವಿಡ್ ನಿಯಮಾನುಸಾರ ಆಚರಣೆ ಮಾಡಬೇಕು ಎಂದು ಸಿಪಿಐ ಮಹಾಂತೇಶ ಸಜ್ಜನ ಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಹಬ್ಬದ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದರು.
ಸಾಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆ ಮಾಡಬಾರದು ಪುರಸಭೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪಡೆದು ಸರಳವಾಗಿ ಆಚರಣೆ ಮಾಡಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ತಹಶೀಲ್ದಾರ ಚಾಮರಾಜ ಪಾಟೀಲ್. ಪಿಎಸೈ ಪ್ರಕಾಶ ಡಂಬಳ. ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರು ಭೋವಿ. ಉಪಾಧ್ಯಕ್ಷ ಎಂ ಡಿ ರಫಿ. ಮುಖ್ಯಾಧಿಕಾರಿ ನರಸಪ್ಪ ಸೇರಿದಂತೆ ಮುಂತಾದವರು ಇದ್ದರು.