ಸಿರುಗುಪ್ಪ:ಧಡೇಸೂಗೂರು ಗ್ರಾಮದ ತುಂಗಭದ್ರಾ ನದಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವಗಳು ತೇಲಿ ಬಂದಿವೆ.
ಮೃತ ಮಹಿಳೆಯನ್ನು ಸಿರಗುಪ್ಪಾ ನಗರದ ಅಂಬಾನಗರದ ದಿ.ರವಿಯ ಪತ್ನಿ ಚನ್ನಮ್ಮ (31) ಹಾಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ನೀರಿನಲ್ಲಿ ತೇಲಿ ಬಂದಿದೆ. ಧಡೇಸೂಗೂರಿನ ತುಂಗಭದ್ರಾ ನದಿ ಸೇತುವೆ ಬಳಿ ಶವಗಳನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಯರಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಚನ್ನಮ್ಮ ಅವರು ಮೂಲತಃ ಗಂಗಾವತಿ ತಾಲೂಕಿನವರು ಎನ್ನಲಾಗಿದೆ. ನಗರದ ಸಾರ್ವಜನಿಕ ಆಸ್ಪತ್ರೆಗೆ ಶವಗಳನ್ನು ರವಾನೆ ಮಾಡಲಾಗಿದೆ