ಬಳ್ಳಾರಿ: ನಗರದ ಕೆ.ಪಿ.ಎಸ್ ಬಾಲಕಿಯರ ಶಾಲೆಯಲ್ಲಿ ಬಳ್ಳಾರಿ ಪೂರ್ವ ವಲಯದ ತಾಲೂಕು ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಕಾರ್ಯಕ್ರಮ ಮತ್ತು 6 ಮತ್ತ 7ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು.
ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ರಾಮಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ನಗರ ಪ್ರದೇಶದ ಮಕ್ಕಳೊಂದಿಗೆ ಶಿಕ್ಷಣ ತಂತ್ರಜ್ಞಾನದಲ್ಲಿ ಪೈಪೋಟಿ ನೀಡುವ ನಿಟ್ಟಿನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಮತ್ತು ಈ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದರು.
ಕೆ.ಪಿ.ಎಸ್ ಬಾಲಕೀಯರ ಶಾಲೆಯ 6 ಮತ್ತು 7ನೇ ತರಗತಿಯ ಮಕ್ಕಳಿಗೆ ಇಲಾಖೆಯ ಉಚಿತ ಪಠ್ಯ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ.ಸಿದ್ಧಲಿಂಗಮೂರ್ತಿ, ಬಿ.ಆರ್.ಸಿ. ಅಡ್ಡೇರು ಮಲ್ಲಪ್ಪ, ಮುಖ್ಯ ಗುರುಗಳಾದ ಕೇಶವಣ್ಣ, ಜಾಕೋಬ್ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಜರಿದ್ದರು. ಸಂಯೋಜಕರಾದ ಗೂಳೆಪ್ಪ ನಿರೂಪಿಸಿದರು.