ಹಾಲುಮತ ಧರ್ಮ ಪ್ರಚಾರ ಸಭೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ 

 

ಲಿಂಗಸುಗೂರು;  ತಾಲೂಕಿನ ಮುದಗಲ್ ಪಟ್ಟಣ ಸಮೀಪದ ನಾಗರಹಾಳ ಗ್ರಾಮದ ಸಂತೆ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹಾಲುಮತ ಧರ್ಮ ಸಭೆಯನ್ನು ಕಾಗಿನಲೇ ಗುರುಪೀಠದ ಹಾಲವರ್ತಿ ಶಾಖಾ ಮಠದ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಉಧ್ಘಾಟಿಸಿದರು.

ನಂತರ ಮಾತನಾಡಿ ಹಾಲುಮತ ಧರ್ಮ ಹಾಲಿನಂತಿರುವ ಸಮಾಜವಾಗಿದ್ದು, ಈ ನಿಟ್ಟಿನಲ್ಲಿ ತಾವುಗಳು ಯಾವುದೇ ಕಾರಣಕ್ಕೂ ಸಮಾಜದಲ್ಲಿ ಒಡಕನ್ನೂ ಮೂಡಿಸದೇ ತಾವೆಲ್ಲರೂ ಒಂದು ಎಂಬ ಭಾವನೆಯಿಂದ ಸಮಾಜವನ್ನು ಮುನ್ನಡೆಸಬೇಕಿದೆ.ನಾಡಿನ ಹೆಸರಾಂತ ದಾರ್ಶನಿಕರಾದ ಕನಕದಾಸರ  ಸಂಗೊಳ್ಳಿ ರಾಯಣ್ಣ

ಸಜ್ಜಲಗುಡ್ಡ  ಶರಣಮ್ಮನವರ ತತ್ವಾದರ್ಶಗಳನ್ನು ತಮ್ಮಲ್ಲಿ ಅಳವಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕಿದೆ ಎಂದರು.ಈ ಕಾರ್ಯಕ್ರಮಕ್ಕೂ ಮೊದಲು ಮಹಿಳೆಯರ ಡೊಳ್ಳು ಕುಣಿತದೊಂದಿಗೆ ಸ್ವಾಮಿಜಿಗಳನ್ನು ವೇದಿಕೆಗೆ ಕರೆತರಲಾಯಿತು. ಸುತ್ತಲಿನ ಗ್ರಾಮಗಳ ಹಾಲುಮತ ಸಮಾಜದ  ಬಂಧುಗಳು ಇದ್ದರು.

 

Share and Enjoy !

Shares