ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ
ಲಿಂಗಸೂಗೂರು ; ಕುರಿಗಳನ್ನು ಮೇಯಿಸಲು ತೆರಳಿ, ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿ ಹಾಗೂ 30 ಕುರಿಗಳನ್ನು ಎನ್ಡಿ ಆರ್ ಎಫ್ ಸಿಬ್ಬಂದಿ ರಕ್ಷಿಸಿದೆ.
ಕೃಷ್ಣಾ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, 30 ಕುರಿಗಳನ್ನು ರಕ್ಷಿಸಿದ NDRFನಿನ್ನೆ, ಲಿಂಗಸುಗೂರು ತಾಲೂಕಿನ ರಾಮಲೂಟಿ ಗ್ರಾಮದ ಬಸಪ್ಪ ಕೊತಿಂಬಳ್ ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ನದಿ ದಾಟಲಾಗದೇ ನಡುಗಡ್ಡೆಯಲ್ಲಿ ಸಿಲುಕಿದ್ದರು.
ಮಾಹಿತಿ ತಿಳಿದ ತಹಶೀಲ್ದಾರ್ ಚಾಮರಾಜ ಪಾಟೀಲ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಎನ್ಡಿಆರ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ನಿರಂತರ ಕಾರ್ಯಾಚರಣೆ ಮೂಲಕ ಬಸಪ್ಪ ಹಾಗೂ ಕುರಿಗಳನ್ನು ರಕ್ಷಿಸಿದ್ದಾರೆ.
ಬೆಳಗ್ಗೆ ಆತ ಕುರಿ ಮೇಯಿಸಲು ತೆರಳಿದ್ದ ವೇಳೆ ನದಿಯಲ್ಲಿ ನೀರು ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಏಕಾಏಕಿ ಹರಿದು ಬಂದ ನೀರಿನಿಂದ ಪ್ರವಾಹ ಪರಿಸ್ಥಿತಿ ಉಂಟಾಯಿತು. ಇಂದು NDRF ಸಿಬ್ಬಂದಿ ಅವರನ್ನು ರಕ್ಷಿಸಿ ಬೋಟ್ ಮೂಲಕ ಕರೆತಂದಿದ್ದಾರೆ.