ವಿಜಯನಗರ ವಾಣಿ ಸುದ್ದಿ ರಾಯಚೂರು
ವರದಿ : ಬಸಲಿಂಗಪ್ಪ ಬಜಂತ್ರಿ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯಲ್ಲಿ ಬರುವ ಕಸಬಾ ಲಿಂಗಸುಗೂರು ಗ್ರಾಮಕ್ಕೆ ಸರಬರಾಜು ಆಗುತ್ತಿರುವ ಮುಖ್ಯ ಪೈಂಪ್ ಲೈನ್ ಪವನ್ ಡಾಬ ಹತ್ತಿರ ಶೌಚಾಲಯ ಗುಂಡಿಯಲ್ಲಿ ಇದ್ದು ಪೈಂಪ್ ಹೊಡೆದು ಹದಿನೈದು ದಿನಗಳು ಕಳೆದರೂ ಪುರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ.
ಶೌಚಾಲಯದ ನೀರು ಹಾಗೂ ಕಸಬಾ ಲಿಂಗಸುಗೂರು ಸರಬರಾಜಾಗುತ್ತಿರುವ ಕುಡಿಯುವ ನೀರಿನ ಜೊತೆ ಶೌಚಾಲಯ ಗುಂಡಿ ಕೊಳಚೆ ನೀರು ಸೇರಿ ಸರಬರಾಜು ಆಗುತ್ತದೆ ಈ ಕಲುಷಿತ ನೀರು ಕುಡಿದು ಕಸಬಾ ಲಿಂಗಸುಗೂರು ಜನರು ಅನೇಕ ರೋಗಗಳಿಗೆ ತುತ್ತಾಗುವ ಪರಸ್ಥಿತಿ ನಿರ್ಮಾಣವಾಗಿದೆ.
ಈ ಕೂಡಲೆ ಪುರಸಭೆ ಮುಖ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.