ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ತಾಲೂಕಿನ ತಂಬ್ರಹಳ್ಳಿ ಬಂಡೇರಂಗನಾಥೇಶ್ವರ ದೇಗುಲದಲ್ಲಿ ಪ್ರತೀ ವರ್ಷದಂತೆ ಶ್ರಾವಣ ಮಾಸದ ಕೊನೆಯ ಶನಿವಾರ ಕಾಣಿಕೆ ಹುಂಡಿಯನ್ನು ತೆರೆದು ಎಣಿಕೆ ನಡೆಸಲಾಯಿತು ಎಂದು ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿ ಶ್ರಾವಣದ ಕೊನೆಯ ಶನಿವಾರ ಎಣಿಕೆ ಕಾರ್ಯ ನಡೆಸಲಾಗಿದೆ. ಹುಂಡಿ ಪೆಟ್ಟಿಗೆಯಲ್ಲಿ 66400 ರೂ.ಗಳು ಸಂಗ್ರಹವಾಗಿದ್ದು ಬಂಡೇ ರಂಗನಾಥಸ್ವಾಮಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಅಪಾರ ಭಕ್ತ ಸಮೂಹವನ್ನು ಸೆಳೆಯುತ್ತಿದೆ. ಪ್ರಸ್ತುತದಲ್ಲಿ ತುಂಗಭದ್ರಾ ನದಿ ಹಿನ್ನೀರು ಬೆಟ್ಟದ ಸುತ್ತಲೂ ಆವರಿಸುವುದರಿಂದ ರಮಣೀಯವಾಗಿ ಕಾಣುತ್ತಿದ್ದು ಪ್ರಕೃತಿ ಸೌಂದರ್ಯ ಮತ್ತು ಭಕ್ತಿಯ ಅರಾಧನೆಗೆಂದು ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಲಕ್ಷ್ಮಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಗೌಡ್ರು, ಅರ್ಚಕ ಯಲ್ಲಪ್ಪಗೌಡ ಪೂಜಾರ್, ರೆಡ್ಡಿ ಮಂಜುನಾಥ ಪಾಟೀಲ್, ಗಂಗಾಧರಗೌಡ, ಟಿ.ವೆಂಕೋಬಪ್ಪ, ಕಡ್ಡಿ ಚನ್ನಬಸಪ್ಪ, ಮಂಜುನಾಥ ಸುಣಗಾರ, ಕ್ಯಾದಗಿಹಳ್ಳಿ ನಿಂಗರಾಜ್, ಬಿ.ಕೊಟ್ರೇಶ, ಕೊಟಿಗಿ ಪ್ರಸನ್ನ, ಸೊಬಟಿ ಹರೀಶ್, ಮ್ಯಾಗಳಮನಿ ಬಸವರಾಜ, ರಾಮು, ಶಿವಮೂರ್ತೆಯ್ಯ, ವೀರೇಶ್‍ಬಾಬು, ಸತ್ಯಪ್ಪ ಇತರರಿದ್ದರು.