ವಿಜಯನಗರ ವಾಣಿ ಸುದ್ದಿ ಕುರುಗೋಡು
ಕುರುಗೋಡು.ರಕ್ತದಾನದಿಂದ ವ್ಯಕ್ತಿಯ ಜೀವ ಉಳಿಸಬಹುದು. ಈ ನಿಟ್ಟಿನಲ್ಲಿ ಜನರು ಆರೋಗ್ಯ ತಪಾಸಣೆಯೊಂದಿಗೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ ಹೇಳಿದರು.
ತಾಲೂಕು ಸಮೀಪದ ಪಟ್ಟಣಸೆರಗು ಗ್ರಾಮದಲ್ಲಿ ಟಚ್ ಫಾರ್ ಲೈಫ್ ಫೌಂಡೇಷನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗಣೇಶ್ ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಾಡಿದರೆ, ಮತ್ತೇ ರಕ್ತದಾನ ಉತ್ತೇಜನವಾಗುವ ಜತೆಗೆ ಸದಾ ಆರೋಗ್ಯದಿಂದಿರಬಹುದು. ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಆರೋಗ್ಯ ತಪಾಸಣೆಯೊಂದಿಗೆ ರೋಗಗಳಿಂದ ದೂರ ಇರಬೇಕು. ಕೋವಿಡ್ ಮುಕ್ತಿಗಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಮಧ್ಯಾಹ್ನದ ಒತ್ತಿಗೆ 40ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಜತೆಗೆ ಕೆಲವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಕುರುಗೋಡು ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬಂಗಿ ಮಲ್ಲಯ್ಯ, ಯೂತ್ ಕುರುಗೋಡು ತಾಲೂಕು ಅಧ್ಯಕ್ಷ ಗಾದಿಲಿಂಗಪ್ಪ, ಮುಖಂಡರಾದ ಓಂಕಾರಪ್ಪ, ಮುಸ್ಟುಗಟ್ಟೆ ಹನುಮಂತಪ್ಪ, ಎಂ.ರಾಘವೇಂದ್ರ ಸೇರಿದಂತೆ ಅನೇಕರಿದ್ದರು.
10 ಕೆಜಿಡಿ 1 ಪಟ್ಟಣಸೆರಗು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ನಾರಾ ಸೂರ್ಯನಾರಾಯಣರೆಡ್ಡಿ ಚಾಲನೆ ನೀಡಿದರು.