ವಿಜಯನಗರವಾಣಿ ಸುದ್ದಿ :
ಕೊಟ್ಟೂರು : ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆಯ ತಡೆಹಿಡಿದಿರುವ ಅನುದಾನ ಮಂಜೂರು ಮಾಡುವಂತೆ ನಾಳಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ಭೀಮ ನಾಯಕ್ ಹೇಳಿದರು.
ಅವರು ಇಂದು ಕ್ಷೇತ್ರವ್ಯಾಪ್ತಿಯ ಸುಮಾರು ರೂ 1.45ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮತ್ತು ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಡಳಿತಾರೂಢ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡ ಬೇಕಾದ ಅನುದಾನವನ್ನು ತಡೆಹಿಡಿದಿದ್ದು ತಾರತಮ್ಯ ಮಾಡುತ್ತಾ ಈಗಾಗಲೇ ಜನ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಕಟ್ಟಿ ಕೊಂಡಿದೆ. ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಸಿರಾಜ್ ಶೇಕ್ ಆಯ್ಕೆಗೆ ಸ್ಥಳೀಯ ಶಾಸಕರ ವಿರೋಧವಿದೆ ಎಂದು ತಿಳಿಸಿದರು. ಹಾಗೂ ಚಪ್ಪರದಹಳ್ಳಿ ಯಲ್ಲಿ ಪಂಚಮಸಾಲಿ ಕಲ್ಯಾಣಮಂಟಪಕ್ಕೆ ಹಾಗು ರುದ್ರ ಭೂಮಿಗೆ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷವರ್ಧನ್, ದೊಡ್ಡರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.