ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು : ತಾಲ್ಲೂಕಿನ ಹಟ್ಟಿಚಿನ್ನದ ಗಣಿ ಪಟ್ಟಣ ದಿಂದ ಚಿಂಚರಕಿ ಗ್ರಾಮದ ಅವರಿಗೆ ರಸ್ತೆ ಅಭಿವೃದ್ಧಿಗಾಗಿ 8 ಕೋಟಿ 30 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಗೆ ಶಾಸಕ ಡಿ ಎಸ್ ಹೂಲಗೇರಿ ಆಗಸ್ಟ 22ರಂದು ಉದ್ಘಾಟನೆ ಮಾಡಿದರು ಆ ವೇಳೆ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಉದ್ಘಾಟನೆ ಕಾಮಗಾರಿ ಆಹ್ವಾನ ಮಾಡಿಲ್ಲ ಎಂದು ಬಿ ಜೆ ಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಚೆಕಮಕಿ ಕೂಡ ಆಗಿತ್ತು ಎರಡು ಪಕ್ಷಗಳ ಮುಖಂಡರ ಆರೋಪ ಪ್ರತ್ಯಾರೋಪಕ್ಕೆ ನಂತರ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಶಾಸಕರ ಹಾಗೂ ಮಾಜಿ ಶಾಸಕರ ಮೇಲೆ ಪ್ರಕರಣ ದಾಖಲು ಕೂಡ ಮಾಡಿದರು ಮತ್ತೆ ಅದೆ ಕಾಮಗಾರಿಯನ್ನು ಇಂದು ಮಾಜಿ ಶಾಸಕ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಭೂಮಿ ಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು
ಇದೆ ರಸ್ತೆ ಕಾಮಗಾರಿಗೆ ಎರಡು ಬಾರಿ ಉದ್ಘಾಟನೆ ಮಾಡಿರುವ ತಾಲೂಕಿನ ಜನರ ಚರ್ಚೆಗೆ ಗ್ರಹಸವಾಗಿದೆ ಹಾಲಿ ಶಾಸಕ ಡಿ ಎಸ್ ಹೂಲಗೇರಿ ಮತ್ತು ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಇಬ್ಬರು ಸೇರಿ ಅಭಿವೃದ್ಧಿ ಒತ್ತುಕೊಡದೆ ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದ್ದೆ.