ಬಳ್ಳಾರಿಜಿಲ್ಲೆ
ಸಿರುಗುಪ್ಪ: ಪ್ರತಿಯೊಬ್ಬರು ಕೊರೊನ ತಡೆಯಲು ಲಸಿಕೆಯನ್ನು ಪಡೆಯಬೇಕು, ಕೊರೊನಾ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿದ್ಯಾಶ್ರೀ ತಿಳಿಸಿದರು.ನಗರದ ಬಳ್ಳಾರಿ ರಸ್ತೆಯ ಬಯಲು ಜಾಗದಲ್ಲಿ ಹಿಂದೂ ಮಹಾಸಭಾ ವತಿಯಿಂದ ಕೂಡಿಸಲಾದ ಗಣಪತಿಯ ಪೆಂಡಾಲ್‌ನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ ಎನ್ನುವ ಸುದ್ದಿಯು ಕೇವಲ ಊಹಾಪೋಹವಾಗಿರುತ್ತದೆ. ಆದ್ದರಿಂದ ಕೊರೊನಾ ಬರುವುದನ್ನು ತಡೆಯಲು ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಂಡರೆ ಅನುಕೂಲವಾಗುತ್ತದೆ, ಕೊರೊನಾ ಲಸಿಕೆ ಹಾಕಲು ತಾಲೂಕಿನಾದ್ಯಂತ ಆರೋಗ್ಯ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಒಟ್ಟು ೧೦೦ ಜನರಿಗೆ ಲಸಿಕೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹಾಕಿದರು.ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಹಿಂದೂ ಮಹಾಸಭಾದ ಪದಾಧಿಕಾರಿಗಳು ಇದ್ದರು.