ಕೃಷ್ಣಾ ನದಿ ಪ್ರವಾಹ ಶೀಲಹಳ್ಳಿ ಸೇತುವೆ ಒಂದೇ ವರ್ಷದಲ್ಲಿ ಎರಡು ಬಾರಿ ಮುಳುಗಡೆ

Share and Enjoy !

Shares
Listen to this article

 

ವಿಜಯನಗರ ವಾಣಿ : ರಾಯಚೂರು ಜಿಲ್ಲೆ

ವರದಿ: ಬಸಲಿಂಗಪ್ಪ ಭಜಂತ್ರಿ

ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಒಂದು  ವಷ೯ದಲ್ಲಿ  ಎರಡು  ಬಾರಿ ಮುಳುಗಡೆಯಾಗಿದ್ದು, ಜನ ಸಂಪರ್ಕ ಕಡಿತಗೊಂಡಿದೆ. ಹಂಚಿನಾಳ, ಯಳಗುಂದಿ, ಕಡದರಗಡ್ಡಿ, ಯರಗೋಡಿ ನಡುಗಡ್ಡೆ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ.

 

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 1 ಲಕ್ಷ 20ಸಾವಿರ ಕ್ಯೂಸಕ್ಸ್   ನೀರು ಹರಿ ಬಿಡುತ್ತಿದ್ದು, ನಡುಗಡ್ಡೆಯಲ್ಲಿ ವಾಸಿಸುತ್ತಿರುವ ಜನತೆ ಆತಂಕ ಎದುರಿಸುತ್ತಿದ್ದಾರೆ.

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ  1 ಲಕ್ಷ ನೀರು ಬಿಡಲಾಗಿದೆ.

ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಹಂಚಿನಾಳ, ಯಳಗುಂದಿ ಕಡದರಗಡ್ಡಿ, ಯರಗೋಡಿ ನಡುಗಡ್ಡೆ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ.

ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶದ ಭಾಗಶಃ ಜನತೆ ನಡುಗಡ್ಡೆಯಲ್ಲಿ ಇದ್ದು, ಪ್ರವಾಹ ಏಕಾಏಕಿ ಏರಿಕೆ, ಇಳಿಯುವಿಕೆಯಿಂದ ಭಯಗೊಂಡಿದ್ದಾರೆ ಎಂದು ಅವರೊಂದಿಗೆ ಸಂಪರ್ಕ ಹೊಂದಿರುವ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

 

Share and Enjoy !

Shares