ಬಳ್ಳಾರಿ: ಸಿರಗುಪ್ಪ ನಗರದ ಲಸಿಕೆ ಪ್ರಮಾಣ ಕಡಿಮೆಯಾಗಿರುವ ವಾರ್ಡುಗಳಿಗೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಗುರುವಾರ ಮನೆ ಮನೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಸಿರುಗುಪ್ಪದ ಹನ್ನೊಂದನೇ ವಾರ್ಡ್ ಸೇರಿದಂತೆ ವಿವಿಧ ವಾರ್ಡ್ ಗಳಿಗೆ ತೆರಳಿ ಜಾಗೃತಿ ಮೂಡಿಸಿದ ಅವರು ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.ಕೋವಿಡ್ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಲಸಿಕೆಯೊಂದೆ ನಮಗಿರುವ ಪರಿಹಾರ. ಉತ್ಸಾಹದಿಂದ ಮುಂದೆ ಬಂದು ಲಸಿಕೆ ಪಡೆಸುಕೊಳ್ಳುವಂತೆ ಜನರಲ್ಲಿ ಅವರು ಮನವಿ ಮಾಡಿದರು.
ಇದೇ ಸೆ.17ರಂದು ಬೃಹತ್ ಪ್ರಮಾಣದ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು,ಜನರು ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಡಿಸಿ ಮಾಲಪಾಟಿ ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ಸಿರಗುಪ್ಪ ತಹಸೀಲ್ದಾರ್ ಹಾಗೂತಾಲೂಕ ಆರೋಗ್ಯ ಅದಿಕಾರಿ
ವಿದ್ಯಾ ಶ್ರೀ ಇತರ ಅಧಿಕಾರಿಗಳು ಇದ್ದರು