ಬಳ್ಳಾರಿ: ಈಗಿನ ಕಾಲದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ತುಂಬಾ ಬೇಡಿಕೆಯಿದ್ದು. ತಾವೂಗಳು ಆಸಕ್ತಿ ಯಿಂದ ತರಬೇತಿ ಪಡೆದುಕೊಂಡು. ಹೈನುಗಾರಿಕೆ ಪ್ರಾರಂಭಿಸಿದರೆ ಉತ್ತಮ ಜೀವನ ನಿರ್ವಹಣೆ ಮಾಡಬಹುದು ಎಂದು ಮುಖ್ಯ ಪಶುಸಂಗೋಪನಾ ಧಿಕಾರಿಗಳಾದ ಡಾ.ಶಶಿಧರ್ ಅವರು ಹೇಳಿದರು.
ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 10 ದಿನಗಳ ಹೈನುಗಾರಿಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಕೆ.ರಮೇಶ ಅವರು ಹೈನುಗಾರಿಕೆ ಮಾಡುವಲ್ಲಿ ಉತ್ತಮ ಹಸುಗಳ ಆಯ್ಕೆ ಮತ್ತು ವಿವಿಧ ತಳಿಯ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಶರಣಬಸವ ರೆಡ್ಡಿ ಡಿ, ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಶರಣಬಸವರೆಡ್ಡಿ ಅವರು ಮಾತನಾಡಿ ನಾವೂ ಆರ್ಥಿಕವಾಗಿ ಸಬಲರಾದರೆ ಕೌಟುಂಬಿಕ ಜೀವನ ಸುಗಮವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಹೈನುಗಾರಿಕೆ ತರಬೇತಿ ನಿಮಗೆ ಸಹಕಾರಿಯಾಗಲಿ ಎಂದು ಹಾರೈಸಿದರು. ಉಪನ್ಯಾಸಕರಾದ ಜಡೇಪ್ಪ, ಮಹಮ್ಮದ್ ನಿಸಾರ್, ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಹಾಗೂ 34 ಜನ ಶಿಭಿರಾರ್ಥಿಗಳು ಭಾಗವಹಿಸಿದ್ದರು.