ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸೂಗೂರು; ತಾಲ್ಲೂಕಿನ ಉಪ್ಪಾರನಂದಿಹಾಳ ಗ್ರಾ ಪಂ . ಯ 2020-21 ನೇ ಸಾಲಿನ 14 ಮತ್ತು 15 ನೇ ಹಣಕಾಸು ಯೋಜನೆಯ 11 ಲಕ್ಷ ರೂಗಳನ್ನು ಪಿ ಡಿ ಓ ಪ್ರವೀಣಕುಮಾರ ಹಾಗೂ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ಪರಮೇಶ ಗೊರ್ ಇಬ್ಬರು ಕೂಡಿಕೊಂಡು ಕ್ರೀಯಾಯೋಜನೆಯಲ್ಲಿರದ ಕಾಮಗಾರಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮಗೆ ಮನಸೋ ಇಚ್ಛೆಯಂತೆ ತಮಗೆ ಬೇಕಾದವರ ಖಾತೆಗೆ ಲಕ್ಷಾಂತರ ರೂಗಳನ್ನು ಹಣ ದುರ್ಭಳಕೆ ಮಾಡಿಕೊಂಡಿರುವುದು ಕಂಡುಬಂದಿದೆ .
ಲಿಂಗಸೂರಿನ ಬಾಲಾಜಿ ಎಂಟರ್ ಪ್ರೈಸಿಸ್ ಮತ್ತು ವರ್ಕ ಕಾಂಟ್ರಾಕ್ಟರ್ ಹೆಸರಿನಲ್ಲಿ 4 ಲಕ್ಷ 29 ಸಾವಿರದ 740 ರೂಗಳನ್ನು ಯಾವುದೇ ಕಾಮಗಾರಿ ಮಾಡದೇ ಅವರ ಖಾತೆಗೆ ಸಂದಾಯ ಮಾಡಿದ್ದಾರೆ.ಅದ್ಯಕ್ಷರ ಸಂಭಂಧಿಕರಾದ ದುರಗಪ್ಪ ಮೇಗಳಪೇಟೆ ಎಂಬುವರ ಹೆಸರಿನಲ್ಲಿ 91 ಸಾವಿರದ 820 ರೂಗಳು , ವಿಜಯ ಕಂಪ್ಯೂಟರ್ ಹೆಸರಿನಲ್ಲಿ 85 ಸಾವಿರ ರೂಗಳು , ಮೌನೇಶ್ವರ ಇಂಜೀನಿರಿಂಗ್ ಹೆಸರಿನಲ್ಲಿ 70 ಸಾವಿರದ 564 ರೂಗಳು , ಮಲ್ಲಿಕಾರ್ಜೂನ ಎಲೆಕ್ಟ್ರಾನಿಕ್ಷಸ್ ಹೆಸರಿನಲ್ಲಿ 47 ಸಾವಿರದ ರೂಗಳು , ಬಿ.ಜಿ.ನಾಯಕ ಭಾರತ್ ಪೆಟ್ರೋಲಿಯಮ್ ಹೆಸರಿನಲ್ಲಿ ಸಾವಿರದ 300 ರೂಗಳು , ಮುದಗಲ್ಲಿನ ಶ್ರೀ ಮೌನೆಶ್ವರ ಸ್ಟೀಲ್ ಪರ್ನಿಚರ್ ಹೆಸರಿನಲ್ಲಿ 70 ಸಾವಿರದ 564 ರೂಗಳು , ಬಸವೇಶ್ವರ ಎಂಟರ್ ಪ್ರೈಸಿಸ್ ಹೆಸರಿನಲ್ಲಿ 1 ಲಕ್ಷದ 41 ಸಾವಿರದ 890 ರೂಗಳು , ಚಂದ್ರಶೇಖರಗೌಡ ಬಸನಗೌಡ ಪಾಟೀಲ್ ಇವರ ಹೆಸರಿನಲ್ಲಿ 19 ಸಾವಿರದ 804 ರೂಗಳು , ಎ.ಆರ್.ಹೂಲ್ಲೂರು ಎಂಟರ್ ಪ್ರೈಸಿಸ್ ಹೆಸರಿನಲ್ಲಿ 43 ಸಾವಿರದ 600 ರೂಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಡಿಸೇಲ್.ಕಂಪ್ಯೂಟರ್ ದುರಸ್ಥಿಪಾಗಿಂಗ್ ಮಾಡುವುದು , ಘನತಾಜ್ಯ ವಾಹನ ದುರಸ್ಥಿ ಹೀಗೆ ನಾನಾ ಕೆಲಸಗಳನ್ನು ನಿರ್ವಹಿಸಲಾಗಿದೆ ಎಂದು ಅಗಸ್ಟ್ ತಿಂಗಳಿನಲ್ಲಿ ಮಾತ್ರ 11 ಲಕ್ಷ ರೂಗಳನ್ನು ತಮಗೆ ಬೇಕಾದವರ ಉಳಿತಾಯ ಖಾತೆಗೆ ಹಣ ಜಮಾವಣೆ ಮಾಡಿ ದುರ್ಭಳಕೆ ಮಾಡಿಕೊಂಡಿದ್ದಾರೆ.
ಸರಕಾರಿಕೆಲಸ ದೇವರ ಕೆಲಸವೆಂದು ನಂಬಿ ನೌಕರಿಗೆ ಹಾಜರಾದ ‘ ಪಿಡಿಓ ಪ್ರವೀಣಕುಮಾರ ಹಾಗೂ ಅಧ್ಯಕ್ಷೆ ಶಕುಂತಲಾ ಗೊರ್ ಲಕ್ಷಾಂತರ ರೂಗಳನ್ನು ಕೊಳ್ಳೆಹೊಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಕೂಡಲೇ
ಮೇಲಧಿಕಾರಿಗಳು ಎಚ್ಚೆತ್ತು ಪರಿಶೀಲಿಸಿ ತಪ್ಪಿತಸ್ಥ ಪಿಡಿಓ ಹಾಗೂ ಅಧ್ಯಕ್ಷರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಗ್ರಾ.ಪಂ.ಯನ್ನು ಸೂಪರ್ ಸೀಡ್ ಮಾಡಬೇಕೆಂದು ಸದಸ್ಯರಾದ ಮೌನೇಶ ಗುರಿಕಾರ , ಅಮರಮ್ಮ ಬಸನಗೌಡ , ಶಾಂತಮ್ಮ ಹಿರೇಹನಮಂತ , ಬೀರಪ್ಪ , ಅಮರೇಶ , ರೇಮಣ್ಣ ನಾಯಕ ಬೋಜಪ್ಪ ಒತ್ತಾಯಿಸಿದ್ದಾರೆ .