ಕುರುಗೋಡು. ಸೆ.18
ಬಸವರಾಜ ಬೊಮ್ಮಾಯಿ ಸರಕಾರ ಜನಪರ ಆಡಳಿತ ನಡೆಸುತ್ತಿದ್ದೂ, ಕೆಲವೇ ತಿಂಗಳಲ್ಲಿ ರಾಜ್ಯದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ ಎಂದು ಶಾಸಕ ಎಂ. ಎಸ್. ಸೋಮಲಿಂಗಪ್ಪ ಹೇಳಿದರು.
ಸಮೀಪದ ಗುಂಡಿಗನೂರು ಗ್ರಾಮದಿಂದ ಎಚ್. ವಿರಾಪುರ ಗ್ರಾಮದ ವರೆಗೆ 2020-21 ಸಾಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಯೋಜನೆ ಅಡಿಯಲ್ಲಿ ಮಂಜೂರಾದ ಡಂಬರಿಕಾರಣ ರಸ್ತೆ ಗೆ ಭೂಮಿ ಪೂಜೆ ನೇರೆವೆರೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಹಿತದೃಷ್ಟಿ ಯಿಂದ ಜನಪರ ಆಡಳಿತ ನಡೆಸುತ್ತಿದೆ ಆದ್ದರಿಂದ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯ ದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ 6 ಜಿಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಳು ಜಯಶೀಲರಾಗುವುದರಲ್ಲಿ ಯಾವುದೇ ಅನುಮಾನ ವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಎಲ್ಲ ಕಡೆ ಕಾರ್ಯಕರ್ತರು ರಕ್ತದಾನ ಶಿಬಿರ ಮತ್ತು ಲಸಿಕಾ ಅಭಿಯಾನ ಮೇಳ ಬದಲು ಎಲ್ಲ ಕಡೆ ಗಿಡ ಸಸಿ ಗಳನ್ನು ನೆಟ್ಟಿದ್ದಾರೆ ಪರಿಸರ ಕಾಪಾಡುವುದರ ಜೊತೆಗೆ ಜನರ ಉತ್ತಮ ಆರೋಗ್ಯ ಕೂಡ ಕಾಪಾಡಬಹುದಿತ್ತು ಎಂದು ಅಭಿಪ್ರಾಯ ಹೊರ ಹಾಕಿದರು.
ನಂತರ ಸ್ಥಳದಲ್ಲಿ ಗುಂಡಿಗನೂರು ಮತ್ತು ಎಚ್. ವಿರಾಪುರ ರಸ್ತೆ ಬಹಳ ದಿನ ಗಳಿಂದ ಹದೆಗೆಟ್ಟಿದ್ದು, ಸಾರ್ವಜನಿಕ ರಿಗೆ ತುಂಬಾ ತೊಂದರೆ ಆಗುತಿತ್ತು, ಆದ್ದರಿಂದ ಕೂಡಲೇ ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ನಡೆಸಬೇಕು, ಅವಧಿ ಒಳಗಡೆ ಮುಗಿಸಿ ಜನರಿಗೆ ಅನುಕೂಲ ಪಡಿಸಬೇಕು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಗುಂಡಿಗನೂರು ಸೇರಿದಂತೆ ಸುತ್ತ ಮುತ್ತ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ದೂರವಾಣಿ ಮೂಲಕ ಶಾಸಕರು ಬಸ್ ಘಟಕದ ವ್ಯವಸ್ಥಾಪಕರಿಗೆ ಕರೆ ಮಾಡಿ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಡಿವೆಯ್ಯ ಸ್ವಾಮಿ, ಬಕ್ಕಾಟೆ ಈರಯ್ಯ, ಉತ್ತನೂರು ರಂಗಪ್ಪ, ಆಗಲೂರು ಮಲ್ಲನಗೌಡ, ಪ್ರಕಾಶ್ ಗೌಡ, ಗುಂಡಿಗನೂರು ಪಂಪನಗೌಡ, ಸುರಿಬಾಬು, ಹುಲುಗಪ್ಪ, ಕೋಮಾರಿ, ಗುತ್ತಿದಾರ ಬಸವರಾಜ್ ಸೇರಿದಂತೆ ಗ್ರಾಮದ ಮುಖಂಡರು ಇತರರು ಇದ್ದರು.