ಕಮಲದಿನ್ನಿ ಪರಿಸರದಲ್ಲಿ ಅಪ್ರಕಟಿತ ಶಾಸನಗಳ ಪತ್ತೆ:

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

ಲಿಂಗಸೂಗೂರು  ; ಈ ಪರಿಸರವು ಮಾವಿನಬಾವಿ, ಕಾಚಾಪುರ, ಆನೆಹೊಸೂರು, ಭೋಗಾಪುರ ಕಮಲದಿನ್ನಿ, ನಾಗರಹಾಳ ಮೊದಲಾದ ಗ್ರಾಮಗಳ ಪರಿಸರವನ್ನೊಳಗೊಂಡಿದ್ದು, ೦೮ ಶಾಸನಗಳು ಪತ್ತಯಾಗಿವೆ. 

ಇಲ್ಲಿನ ಮಾವಿನ ಬಾವಿ ಗ್ರಾಮದ ಕ್ರಿ.ಶ. ೧೫-೧೬ನೇ ಶತಮಾನದ ಶಾಸನದಲ್ಲಿ ಒಟ್ಟು ಹದಿಮೂರು ಸಾಲುಗಳಿಂದ್ದು, ಐದು ಅಡಿ ಎತ್ತರ, ಒಂದೂವರೆ ಅಡಿ ಅಗಲದ ಕಣ ಶಿಲೆಯ ಶಾಸನವಾಗಿದೆ. ಇದರಲ್ಲಿ ಬಗಿಲ ಅಳ್ಳಪ್ಪ ನಾಯಕನಿಗೆ ಹಮ್ಮರಸನೆಂಬಾತ ದತ್ತಿ ನೀಡಿದ ವಿಷಯವಿದೆ.

ಶಾಸನದ ಕೊನೆಯಲ್ಲಿ ಇದನ್ನು ಹಾಳು ಮಾಡಿದವರಿಗೆ ಕೆಟ್ಟ ಪದಗಳ ಬೈಗುಳಗಳನ್ನು ಹಾಕಿಸಲಾಗಿದೆ. ಕಾಚಾಪುರ ಗ್ರಾಮದ ಕ್ರಿ.ಶ. ೧೭-೧೮ನೇ ಶತಮಾನದ ಶಾಸನದಲ್ಲಿ ಅಮರ ನಾಯಕರ ಕುರಿತು ಹೇಳುತ್ತದೆ. ಆನೆಹೊಸೂರು ಗ್ರಾಮದ ಕ್ರಿ.ಶ. ೧೮-೧೯ನೇ ಶತಮಾನದ ಕಣ ಶಿಲೆಯ ಸ್ತಂಭ ಶಾಸನದಲ್ಲಿ ಶುಭಮಸ್ತು ಸಾಸಿರ ಅರನೂರು ಮುದಗಲ್ಲಿನ ಉಲ್ಲೇಖವಿದೆ. 

ಭೋಗಾಪುರ ಗ್ರಾಮದ ನರಸಿಂಗ ಗೌಡರ ಹೊಲದಲ್ಲಿನ ಶಾಸನದಲ್ಲಿ ಮುಮ್ಮಡಿ ಜಮುಖಾನ ಒಡೆಯನು ಭೋಗಾಪುರವನ್ನು ನರಸಯ್ಯನಿಗೆ ಉಂಬಳಿಯಾಗಿ ನೀಡಿದ ವಿಷಯವಿದೆ. ಕಮಲದಿನ್ನಿ ಗ್ರಾಮದ ಈಶ್ವರ ದೇವಾಲಯದ ಸ್ತಂಭಕ್ಕೆ ಇರುವ ಕ್ರಿ.ಶ. ೧೨೧೦ರ ಶಾಸನದಲ್ಲಿ ಸೇವುಣ ಅರಸ ಸಿಂಘಣ, 

ಈತನ ಸಾಮಂತ ಅರಸನಾಗಿ ಕರಡಿಕಲ್ಲು-೩೦೦ ರನ್ನು ನರಸಿಂಗ ರಾಹುತನೆಂಬಾತ ಆಳ್ವಿಕೆ ಮಾಡುತ್ತಿದ್ದನು. ಇದರೊಂದಿಗೆ ಕೃಷ್ಣಾವೆಣ್ನಾ ನದಿಯ ಉಲ್ಲೇಖವಿದೆ. ಇದೇ ಗ್ರಾಮದ ಇನ್ನೊಂದು ಕ್ರಿ.ಶ. ೧೨೧೦ರ ಶಾಸನವು ಕೇವಲ ಸೇವುಣ ಸಿಂಘಣನ ಬಗ್ಗೆ ದಾಖಲಿಸುತ್ತದೆ. ಇದೇ ಗ್ರಾಮದ ಮತ್ತೊಂದು ಕ್ರಿ.ಶ. ೧೫೨೨ರ ಶಾಸನವು ಲಕ್ಕಮ್ಮ ದೇವಾಲಯದ ಆವರಣದಲ್ಲಿದ್ದು, ವಿಜಯನಗರ ಸಾಮ್ರಾಟ ಕೃಷ್ಣದೇವರಾಯನು ರಾಜ್ಯಭಾರ ಮಾಡುವ ಕಾಲದಲ್ಲಿ ಮುದ್ಗಲ್ ಸೀಮೆಯ ಪ್ರದೇಶವನ್ನು ಓಬನಾಯಕ ನೆಂಬಾತನು ಆಳ್ವಿಕೆ ಮಾಡುತ್ತಿದ್ದನು. ಈ ಓಬನಾಯಕನು ಲಕ್ಕಮ್ಮ

ದೇವರಿಗೆ ದತ್ತಿ ನೀಡಿದ ಪ್ರಸ್ತಾಪವಿದೆ. ನಾಗರಹಾಳ ಗ್ರಾಮದ ಊರ ಬಾವಿಯ ಗೋಡೆಯಲ್ಲಿ ಜೋಡಿಸಿದ ಕ್ರಿ.ಶ. ೧೮೯೯ರ ಶಾಸನದಲ್ಲಿ ಈ ಬಾವಿಯನ್ನು ರಾಮಪ್ಪ ಸರನಾಡಗೌಡ ಎಂಬಾತನು  ನೇಮಿಸಿದರು ಎಂದು ಇತಿಹಾಸ ಸಂಶೋಧಕರು ಹಾಗೂ ಉಪನ್ಯಾಸಕಾದ ಡಾ. ಚನ್ನಬಸಪ್ಪ ಮಲ್ಕ0ದಿನ್ನಿ. ಯವರ  ಪತ್ರಿಕೆ ಪ್ರಕಟನೆ ಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ.ನಿಜಲಿಂಗಯ್ಯ ಹಾಲದೇವರ ಮಠ ಶಿಕ್ಷಕರು, ಅಮರೇಶ ನಾಗರಹಾಳ, ಹಾಗೂ ಗ್ರಾಮದ ಜನರು  ಇದ್ದರು.

.

Share and Enjoy !

Shares