ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸೂಗೂರು .ನಾರಾಯಣಪುರ ಜಲಾಶಯದ ಮುಖ್ಯ ನಾಲೆ 44-45 ಕಿಲೋಮೀಟರ್ ಒಳಗಡೆ ಈ ನಾಲೆ ಮಾಡಿ 2 ತಿಂಗಳು ಸಹ ಕಳೆದಿಲ್ಲ ಆಗಲೇ ಕಾಲುವೆ ಹೊಡೆದು ಹೋಗೀದೆ
950 ಕೋಟಿ ವೆಚ್ಚದ ನಾಲೆಯ ಆಧುನೀಕರಣ ಕಾಮಗಾರಿ 01-90 km ರ ವರೆಗೆ ಡಿ ವೈ ಉಪ್ಪಾರ್ ಕಂಪನಿಯವರಿಗೆ ಗುತ್ತಿಗೆ ಕೊಡಲಾಗಿದೆ ಉಪ್ಪಾರ್ ಕಂಪನಿಯವರು ಕಳಪೆ ಕಾಮಗಾರಿ ಮಾಡಿ ಕೈ ತೊಳೆದು ಕೊಂಡಿದ್ದಾರೆ ಮಳೆಯಿಂದಾಗಿ ರೈತರ ಜಮೀನಿನ ನೀರು ಕಾಲುವೆಗೆ ಹರಿಯುತ್ತಿದೆ..
ಕಳಪೆ ಕಾಮಗಾರಿ ಮಾಡಿದ ಡಿ ವೈ ಉಪ್ಪಾರ್ ಕಂಪೆನಿಯ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಿ ಸರ್ಕಾರದ ಹಣ ಲೂಟಿ ಮಾಡಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು.. ಎಂದು ರೈತರು ಆಗ್ರಹಿಸಿದ್ದಾರೆ.
ಅಮರೇಗೌಡ ಪಾಟೀಲ್ ಗುಂತಗೋಳ ಕರ್ನಾಟಕ ವಾಲ್ಮೀಕಿ ಮಾಹಾಸಭಾ ಜಿಲ್ಲಾ ಉಪಾಧ್ಯಕ್ಷರು ಕಳಪೆ ಕಾಮಗಾರಿಯಿಂದಾಗಿ ಕಾಲುವೆ ಹೊಡೆದು ಹೊದರು ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರಾದ ಸಿದ್ದೇಶ ಗೌಡೂರು ಆರೋಪಿಸಿದ್ದಾರೆ.