ವಿಜಯನಗರ ವಾಣಿ ಸುದ್ದಿ ರಾಯಚೂರು
ಲಿಂಗಸೂಗೂರು ; ತಾಲೂಕಿನ ಗೌಡೂರ ಗ್ರಾ.ಪಂ.ಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಕೋಟಿ ಗಟ್ಟಲೆ ಅವ್ಯವಹಾರ ನಡೆದಿದೆ.2018 ರಿಂದ 2021 ರ ಅವಧಿಯಲ್ಲಿ 919 ಫಲಾನುಭವಿಗಳ ಸುಳ್ಳು ಹೆಸರುಗಳು ಸೃಷ್ಠಿಸಿ,1 ಕೋಟಿ ಮೇಲ್ಪಟ್ಟು ಬೋಗಸ್ ಬಿಲ್ ಮಾಡಿಕೊಳ್ಳಲಾಗಿದೆ.
ಒಂದೇ ಕುಟುಂಬದ ಹೆಸರಲ್ಲಿ 60 ಸಲ ಬಿಲ್ ಎತ್ತಲಾಗಿದೆ.ಒಂದೇ ಶೌಚಾಲಯದ ಫೋಟೋ ಮೇಲೆ ಹಲವಾರು ಸಲ ಹಣ ಗುಳುಂ ಮಾಡಲಾಗಿದೆ.ಪಕ್ಕದ ಹಳ್ಳಿಯ, ಪಕ್ಕದ ಗ್ರಾ.ಪಂ.ಗಳ ಫಲಾನುಭವಿಗಳ ಹೆಸರು ಸುಳ್ಳು ಬಿಲ್ಲಿಗೆ ಬಳಸಿ ಕೊಳ್ಳಲಾಗಿದೆ.
ಯಾದಗಿರ,ಗುಲ್ಬರ್ಗಾ ಜಿಲ್ಲೆಗಳ ಜನರ ಹೆಸರು ಬಳಸಿ ಕೊಳ್ಳಲಾಗಿದೆ. ಕಂಪ್ಯೂಟರ ನಿರ್ವಾಹಕಾ ಗುರುಗುಂಟಾ ಗ್ರಾಮದವರಾಗಿದ್ದು ,ತನ್ನ ಕುಟುಂಬದ ಆಪ್ತರ ಹೆಸರು ಬರೆಸಿ ಸುಳ್ಳು ಬಿಲ್ ಎತ್ತಿದ್ದಾರೆ. ಸಮಗ್ರ ತನಿಖೆ ನಡೆಸಿ,ಕ್ರಮಕ್ಕೆ ಶರಣಪ್ಪ ಮಟ್ಟೂರು ಮಾಹಿತಿ ಹಕ್ಕು ಹೋರಾಟಗಾರರು ಒತ್ತಾಯಿಸಿದರು.