ದೇವದುರ್ಗ :108 ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನನ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

 

ದೇವದುರ್ಗ.ತಾಲೂಕಿನ ಶಿವಂಗಿ  ಗ್ರಾಮದ  ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ,ಅರಕೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಕವಚ 108 ವಾಹನದಲ್ಲಿಯೇ, ಹೆರಿಗೆಯಾದ ಘಟನೆ ಮದ್ಯರಾತ್ರಿ ನಡೆದಿದೆ, ತಾಯಿ ಮಗು ಆರೋಗ್ಯವಾಗಿದ್ದರೆ, ದೇವದುರ್ಗ ತಾಲೂಕಿನ ಶಿವಂಗಿ ಗ್ರಾಮದ ನಿವಾಸಿ ಹನುಮಂತಿ ವಿರುಪಾಕ್ಷಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ, ಕುಟುಂಬಸ್ಥರು 108 ಆಂಬುಲೆನ್ಸ್ ಗೆ, ಕರೆ ಮಾಡಿದ್ದರು, ಗಬ್ಬೂರು  ಆರೋಗ್ಯ ಕವಚ 108 ಆಂಬುಲೆನ್ಸ್ ಶಿವಂಗಿ ಗ್ರಾಮಕ್ಕೆ ತೆರಳಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಂಬುಲೆನ್ಸ್ ಮೂಲಕ, ಅರಕೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಬರುವಾಗ, ಹೆರಿಗೆ ನೋವು ಹೆಚ್ಚಾಗಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶುಶ್ರೂಷಕ ,( emt )ನಾಗರಾಜ್ ಅವರು ಮಾರ್ಗ ಮದ್ಯ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಸುರಕ್ಷಾತ  ಹೆರಿಗೆ ಮಾಡಿಸಿ ನಂತರ ತಾಯಿ ಮಗುವನ್ನು ಅರಕೇರಾ ಸಮುದಾಯ ಕೇಂದ್ರ ಕ್ಕೆ  ದಾಖಲಿಸಲಾಗಿದೆ,

 

108 ವಾಹನದ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ ಚಾಲಕ (pilot ) ಸಿ.ಎಂ.ಹಿರೇಮಠ್ ಮತ್ತು(emt) ಶುಶ್ರೂಷಕ, ನಾಗರಾಜ್ ಅವರಿಗೆ ಕುಟುಂಬಸ್ಥರು ಅಭಿನಂದಿಸಿದ್ದಾರೆ.

Share and Enjoy !

Shares