ವಿಜಯನಗರ ವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸಗೂರು ತಾಲೂಕಿನಲ್ಲಿ ಮತ್ತು ಲಿಂಗಸಗೂರು ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಅಲೆಮಾರಿ ಬುಡ್ಗಜಂಗಮ ಮತ್ತು ಸುಡುಗಾಡು ಸಿದ್ಧ ಸಮುದಾಯ ಗಳ ನಿವೇಶನ ರಹಿತ 96 ಕುಟುಂಬಗಳಿಗೆ ಸರಕಾರಿ ಜಮೀನು ಆದ ಕರಡಕಲ್ಲ ಸೀಮಾಂತರದ ಸರ್ವೆ ನಂಬರ: 286 ರ ಒಟ್ಟು 42 ಎಕರೆ 33 ಗುಂಟೆ ಪೈಕಿ 5 ಎಕರ ಜಮೀನನ್ನು ಸಮುದಾಯಗಳಿಗೆ ನಿವೇಶನ ಹಕ್ಕುಪತ್ರಕ್ಕಾಗಿ. ಮಂಜೂರಾತಿ ನೀಡ ಬೇಕು ಲಿಂಗಸುಗೂರ ಶಾಸಕರಿ ಮನವಿ ಸಲ್ಲಿಸಿದರು
ಲಿಂಗಸಗೂರು ಪಟ್ಟಣದ ವಾರ್ಡ ನಂಬರ: 05 ರಲ್ಲಿ ಬರುವ ಸಂತಬಜಾರ ಹಾಗೂ ಕಾಳಾಪುರ ಕ್ಲಾಸ್ ಹತ್ತಿರ ಜಿ.ಟಿ.ಟಿ.ಸಿ, ಕಾಲೇಜ ಯಾದವಾಡ ಆಸ್ಪತ್ರೆ ಹತ್ತಿರ ಲಿಂಗಸಗೂರು ನಲ್ಲಿ ವಾಸಿಸುವ ಎಸ್.ಸಿ, ಆಲಮಾರಿ ಬುಡ್ಗಜಂಗಮ ಮತ್ತು ಸುಡುಗಾಡುಸಿದ್ದ ಸಮುದಾಯವರು 75 ವರ್ಷಗಳಿಂದ ನಿವೇಶನ ಮತ್ತು ವಸತಿ ಇಲ್ಲದೆ ಇತರೆ ಮೂಲಭೂತ ಸೌಲಭ್ಯಗಳಿಲ್ಲದೆ, ಮಳೆ, ಗಾಳಿ, ಸಿಡಿಲು, ಬಿಸಲು ವಿಜ ಜಂತುಗಳಿಂದ ಆಚ ಮೊರಿ ಕೇರಿಗಳಲ್ಲಿ ಎಲ್ಲಾ ಸಮುದಾಯಗಳಿಗಿಂತ ಅಸ್ಪೃಶ್ಯರಿಗಿಂತ ಕೀಳುಲುಮೆಯಾಗಿ ಭೀಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. 17-09-2021 ರಂದು ಕಲ್ಯಾಣ ಕರ್ನಾಟಕ ಅಂಗವಾಗಿ ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ಮುಖಾಂತರ ಸರಕಾರ ಗಮನಹರಿಸಿ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆದರಂತೆ. ಲಿಂಗಸುಗೂರು ಬೇಡಿಕೆಯನ್ನು ಮಾನ್ಯ
ಜಿಲ್ಲಾಧಿಕಾರಿಗಳು ಶಿಫಾರಸ್ಸು ಕಾರ್ಯವ್ಯಾಪ್ತಿಯಲ್ಲಿ ಬರುವ ಸರಕಾರಿ ಜಮೀನು ಆದ ಕರಡಕಲ್ಲ ಸೀಮಾಂತರ ಸರ್ವೆ ನಂಬರ: 286 ರ ಒಟ್ಟು 42 ಎಕರೆ 33 ಗುಂಟೆ ಪೈಕಿ 5 ಎಕರೆ ಜಮೀನನ್ನು ಎಸ್ಟಿ. ಎಸಿ. ಅಲೆಮಾರಿ ಬುಡ್ಗಜಂಗಮ ಮತ್ತು ಸುಡುಗಾಡುಸಿದ್ದ ಸಮುದಾಯದ 95 ನಿವೇಶನ ರಹಿತ ಕುಟುಂಬಗಳಿಗೆ ಈ ಕೂಡಲೇ ನಿವೇಶನ ಹಕ್ಕು ಪತ್ರ ಹಂಚಲು ಮತ್ತು ಜಮೀನು ಮಂಜೂರು. ನೀಡಲು ಲಿಂಗಸುಗೂರ ಶಾಸಕರಿಗೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ
ಶಿವರಾಜ ರುದ್ರಾಕ್ಷಿ ಜಿಲ್ಲಾ ಅಧ್ಯಕ್ಷರು ಉಮೇಶ ಮಹಾಂತೇಶ ಸರಕಲ್ ಬಸವರಾಜ ಕೋಡ ಬು.ಜ ಲಿಂ.ಆಂಜನೇಯ ಮೋಹಿ ಜಿಲ್ಲಾ ಸಂಚಾಲಕರುವೀರಣ್ಣ ಮೋಜ SC-ST ಅಲೆಮಾಲಿ, ಬಿಮುಕ್ತ ಬುಡಕಟ್ಟು ಮಹಾಸಭಾಸು.ಶಿ.ಲಿ, ತಾ, ಅಧ್ಯಕ್ಷರು ಉಪಸ್ಥಿತರಿದ್ದರು