ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸೂಗೂರು ; ಮಹಾಮಾರಿ ಕೊರೋನಾ ಮೂರನೇ ಅಲೆ ಬರುವ ಮೂಸೂಚನೆ ಇದ್ದರು ರಾಯಚೂರು ಜಿಲ್ಲೆಯ ಲಿಂಗಸುಗೂರು ಉಪ ಕೃಷಿ ನಿರ್ದೇಶಕರ ಕಾರ್ಯಾಲಯ ಮುಂದೆ ಜನರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು ತಾಡಪಾಲ ವಿತರಣೆ ಮಾಡುವ ಮೂಲಕ ಕೊರೋನಾ ನಿಯಮಗಳನ್ನು ಕೃಷಿ ಅಧಿಕಾರಿಗಳು ಗಾಳಿಗೆ ತೂರಿರುವ ದೃಶ್ಯ ಕಂಡು ಬಂದಿದು.
ಕೃಷಿ ಕಚೇರಿ ಮುಂದೆ ರೈತರು ಮಹಿಳೆಯರು ಸಾಮಾಜಿಕ ಅಂತರವಿಲ್ಲದೆ ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಇಲ್ಲದೆ ತಾಡಪಾಲ್ ವಿತರಣೆಯಲ್ಲಿ ಭಾಗವಹಿಸಿದರು.ಕೃಷಿ ಅಧಿಕಾರಿಗಳು ಮಾತ್ರ ರೈತರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸದೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದೆ.