ನಿರುದ್ಯೋಗಿ ಯುವಕರಿಗೆ ಅಲ್ಪಾ ವದಿ ಕೋರ್ಸ ಜಿ.ಟಿ.ಟಿ.ಸಿ.ಕಾಲೇಜ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ ರಾಯಚೂರು

ಲಿಂಗಸುಗೂರ ; ಪ್ರಾಂಶುಪಾಲ ರಾಜಕುಮಾರ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಯಡಿಯಲ್ಲಿ ಪಟ್ಟಣದ ಸರ್ಕಾರಿ ಉಪ ಕರಣಾಗಾರ ಮತ್ತು ತರಬೇತಿ ಕೇಂದ್ರ ದಲ್ಲಿ ನಿರುದ್ಯೋಗಿ ಯುವಕರಿಗೆ ಅಲ್ಪಾ ವದಿ ಕೋರ್ಸಗಳಿಗೆ ತರಬೇತಿ ನೀಡ ಲಾಗುತ್ತಿದೆ ಎಂದು ಜಿಟಿಟಿಸಿ ಪ್ರಾಚಾರ್ಯ ರಾಜಕುಮಾರ ಹೇಳಿದರು

ಶುಕ್ರವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟ ಣದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಗಿರಿ ಜನ ಎಸ್‌ಸಿ ಮತ್ತು ಎಸ್‌ಟಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉಚಿತ ವೃತ್ತಿಪರ ಕೌಶಲ್ಯ ಅಭಿವೃದ್ಧಿ ತರ ಬೇತಿಯನ್ನು ಸರ್ಕಾರದ ಕೌಶ ಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ

ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಅಲ್ಪಾವಧಿಯ ಕೋರ್ಸ ಗಳು ಟೂಲ್ ರೂಂ ಮಶಿನಿಷ್ (ಟಿಆರ್‌ಎಮ್) ವರ್ಷ ಮತ್ತು ಸಿಎನ್‌ಸಿ ಆಪರೇಟರ್, ಟುನರ್, ಮಿಲ್ಲರ್, ಗೈಂಡರ್ ಎರಡರಿಂದ 6 ತಿಂಗಳ ಕೋರ್ಸುಗಳಿಗೆ ತರಬೇತಿ ನೀಡಲಾಗುವುದು ತರಬೇತಿ ಅವ ಧಿಯಲ್ಲಿ ಶಿಷ್ಯವೇತನ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲಾ ಮೋ, ಬಿಇ ಮುಗಿಸಿ ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡ ಲಾಗುತ್ತಿದೆ. ಆಸಕ್ತರು 16-35 ವರ್ಷ ದೊಳಗಿನ ನಿರುದ್ಯೋಗಿ ಯುವಕ ಮತ್ತು ಯುವತಿಯರು ಅಕ್ಟೋಬರ್ 8  ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪಟ್ಟಣದ ಜಿಟಿ ಟಿಸಿ ಕಾಲೇಜಿಗೆ ಅಥವಾ 9916 231899 ಸಂಪರ್ಕಿಸಬಹುದು ಎಂದರು.ಸಿಬ್ಬಂದಿಗಳಾದ ಗುರುಬಸಪ್ಪ, ಅಶೋಕ ಭಜಂತ್ರಿ, ಶಫೀಕ್ ಅಹ್ಮದ್, ವಿರೇಶ ಹಾಗೂ ಇದ್ದರು

 

Share and Enjoy !

Shares