ವಿಜಯನಗರ ವಾಣಿ ಸುದ್ದಿ : ವಿಜಯನಗರ
ವಿಜಯನಗರ(ಹೊಸಪೇಟೆ): ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಅಂಗವಾಗಿ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಹೊತ್ತುತಂದ ಜ್ಯೋತಿಗಳನ್ನು ಹಕ್ಕಬುಕ್ಕ ಮಹಾದ್ವಾರದ ಬಳಿ ಪ್ರತಿಷ್ಠಾಪಿಸಲಾ ಗಿರುವ ಶ್ರೀಕೃಷ್ಣದೇವರಾಯ ಪ್ರತಿಮೆ ಬಳಿಯ ಕುಂಡದಲ್ಲಿ ಜ್ಯೋತಿ ಪ್ರಜ್ವಲಿ ಸಲಾಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನ ಹಳ್ಳಿ, ಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳಿಂದ ತಾಲೂಕಾಡಳಿತ ಹಾಗೂ ತಾಲೂಕು ಹೋರಾಟಗಾರರು ಜೊತೆಗೂಡಿ ಹೊತ್ತು ತಂದ ಜ್ಯೋತಿಗಳನ್ನು ಶ್ರೀಕೃಷ್ಣದೇವರಾಯ ಪ್ರತಿಮೆ ಬಳಿಯ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಯಿತು. ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ವಿವಿಧ ತಾಲೂಕುಗಳ ಜ್ಯೋತಿಗಳನ್ನು ಬೃಹತ್ ಕುಂಡದಲ್ಲಿ ಪ್ರಜ್ವಲಿಸಿ ಹೋರಾಟಗಾರ ರೊಂದಿಗೆ ಖುಷಿ ಹಂಚಿಕೊಂಡರು.