ವಿಜೃಂಭಣೆಯ ವಿಜಯನಗರ ಉತ್ಸವ ಜನರ ಗಮನಸೆಳೆದ ವಾಸ್ತುಶೈಲಿ, ಕರಕುಶಲ ವಸ್ತುಗಳು

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ವಿಜಯನಗರ(ಹೊಸಪೇಟೆ): ಜೋಗಜಲಪಾತದ ವಿಸ್ಮಯ ನೋಟ, ಪಟ್ಟದ ಕಲ್ಲು, ಕಲ್ಲಿನ ರಥದ ವಿಭಿನ್ನ ಶೈಲಿ, ಚಾಲುಕ್ಯರ ವಾಸ್ತು ಶಿಲ್ಪ, ವಿಶ್ವವಿಖ್ಯಾತ ಚೆನ್ನಪಟ್ಟದ ಗೊಂಬೆಗಳು, ನೋಡುಗರ ಕಣ್ಮನ ಸೆಳೆದ ಖ್ಯಾತ ಛಾಯಾ ಗ್ರಾಹಕರ ಬಣಗಾರರ ಚಿತ್ರಗಳು ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ವಿಜಯನಗರ ಉತ್ಸವದಲ್ಲಿ!. ವಿಜಯ ನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಮಳಿಗೆಗಳಲ್ಲಿ ಹಲವಾರು ವಿಶೇಷಗಳು ನೋಡುಗರನ್ನೊಮ್ಮೆ ಮೂಕವಿಸ್ಮಿತ ರನ್ನಾಗಿಸಿದವು.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ನಂದಿ ಹಿಲ್ಸ್, ಎಲ್ಲಾ ರೀತಿಯ ಸುಸಜ್ಜಿತವಾದ ವಾತಾವರಣವುಳ್ಳ ಸುವರ್ಣರಥ, ಶಿವಮೊಗ್ಗದ ಜೋಗಜಲ ಪಾತ, ಚಾಲುಕ್ಯರ ವಾಸ್ತು ಶಿಲ್ಪದ ವೈಭವ, ಉತ್ತರ ಭಾರತ ನಾಗರ ಶೈಲಿ ಮತ್ತು ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಾಸ್ತುಶೈಲಿಯ ವರ್ಣ ರಂಜಿತ ಚಿತ್ರಗಳು ವಿಶೇಷವಾ ಗಿದ್ದವು. ಚನ್ನಪಟ್ಟಣದ ಗೊಂಬೆ: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ವತಿಯಿಂದ ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳು, ಮೈಸೂರು ರೋಸ್ ವುಡ್, ಬೆಂಗಳೂರಿನಲ್ಲಿ ತಯಾರಿಸಿದ ವಿವಿಧ ರೀತಿಯ ಆಟಿಕೆ ವಸ್ತುಗಳು, ಸುಗಂಧ ಬೀರುವ ಅಗರಬತ್ತಿ, ಪುಟ್ಟದ ಪುಟ್ಟದ ಗೊಂಬೆಗಳ ತಯಾರಿ ಕೆಯಲ್ಲಿ ಮಕ್ಕಳು ನಿರತರಾಗಿರುವ ದೃಶ್ಯಗಳು ಕಂಡು ಬಂದವು.

ಜನನಿ ಟೀಮ್ ನ ವಿಶೇಷ ಕಾರ್ಯ: ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿ ಸುವ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿರುವ ಹೊಸಪೇಟೆಯ ಜನನಿ ತಂಡ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ವೀಕ್ಷಕರಿಗೆ ಮಾಹಿತಿ ನೀಡು ವಲ್ಲಿ ನಿರತರಾಗಿದ್ದರು. ಜನನಿ ತಂಡದಿಂದ ಇದುವರಗೆ 625 ಹೆರಿಗೆಗಳನ್ನು ಉಚಿತವಾಗಿ ಮಾಡಿಸಲಾಗಿದೆ. ತಾಯಂದಿರಿಗೆ ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸಲು ವಿವಿಧ ರೀತಿಯ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಬೇಳೆ, ಹೆಸರು ಒಳಗೊಂಡಂತೆ ಪೌಷ್ಠಿಕಾಂಶಯುಕ್ತ ಪದಾರ್ಥಗಳಿಂದ ತಯಾರಿಸಿದ ತಾಯಿ ಮಗುವಿನ ಚಿತ್ರ ನೋಡುಗರ ಗಮನ ಸೆಳೆಯಿತು. ಇದರ ಕುರಿತು ಮಾತನಾಡಿದ ಜನನಿ ತಂಡದ ಕಾರ್ಯದರ್ಶಿ ಹುಲಿಗೆಮ್ಮ ಅವರು ಮಳಿಗೆ ಮೂಲಕ ತಾಯಿ ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಕುರಿತು ಮಾಹಿತಿ ಮತ್ತು ಅರಿವು ಮೂಡಿಸುವ ಜೊತೆಗೆ ಸರ್ಕಾರದ ಹಲವು ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಹುಲಿಯ ಜೊತೆ ಫೆÇೀಟೋಗೆ ಫೆÇಸು ಕೊಟ್ಟ ಸಚಿವ ಆನಂದ್‍ಸಿಂಗ್: ಅರಣ್ಯ ಇಲಾಖೆಯಿಂದ ಸಮಾರಂ ಭದ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಮಳಿಗೆ ಯಲ್ಲಿ. ಝೂಲಾಜಿಕಲ್ ಪಾರ್ಕ್ ನಲ್ಲಿ ನೋಡಬಹುದಾದ ಹುಲಿ, ಚಿರತೆ, ಕರಡಿಯ ಚಿತ್ರಗಳನ್ನು ಪ್ರದರ್ಶನ ಏರ್ಪಡಿಸಿದ್ದರು. ವೀಕ್ಷಕರು ಅವುಗಳೊಂದಿಗೆ ಸೆಲ್ಫಿಗೆ ಫೆÇಸು ನೀಡು ತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತೆ ಕಂಡು ಬಂದವು. ಸಚಿವ ಆನಂದ್ ಸಿಂಗ್ ಅವರು ಹುಲಿಯ ಚಿತ್ರದೊ ಂದಿಗೆ ಫೆÇಟೋಗೆ ಫೆÇಸು ಕೊಟ್ಟಿದ್ದು ಎಲ್ಲರ ಗಮನಸೆಳೆಯಿತು.

ಗಮನ ಸೆಳೆದ ಬಾಳೆ ಗೊನೆ: ಒಂದು ಗೊನೆಯಲ್ಲಿ 75 ಕೆ.ಜಿ. ಬಾಳೆ ಬೆಳೆದು ಇತರರಿಗೆ ಮಾದರಿಯಾದ ರೈತ ಕೆ.ಬಸಪ್ಪ ಅವರು ಬೆಳೆದ ಬಾಳೆಯನ್ನು ತೋಟಗಾರಿಕೆ ಇಲಾಖೆಯಿಂದ ಪ್ರದರ್ಶನಕ್ಕೆ ಏರ್ಪಡಿಸಲಾಗಿತ್ತು. ಬಾಳೆಯ ಗಾತ್ರ ಮತ್ತು ಗೊನೆ ಎಲ್ಲರನ್ನು ತನ್ನತ್ತ ಸೆಳೆಯಿತು.

ರಾಯನಕೆರೆಯ ರೈತ ರಾಜಶೇಖರ್ ಅವರು ಬೆಳೆದ ವಿಶಿಷ್ಟ ಬೆಳೆಯಾದ ಡ್ರಾಗ್ಯಾನ್ ಫ್ರೂಟ್ ಬಗ್ಗೆ ಸಮಾರಂಭಕ್ಕೆ ಆಗಮಿಸಿದ್ದ ವೀಕ್ಷಕರು ಮಾಹಿತಿ ಪಡೆದಿದ್ದು ವಿಶೇಷವಾಗಿತ್ತು. ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಾಯವಾಗುವ ಡ್ರಾಗ್ಯಾನ್ ಫ್ರೂಟ್ ನ ಒಂದು ಹಣ್ಣು ಖರೀದಿಸಲು ಬರೋಬ್ಬರಿ 100 ರೂಪಾಯಿ ಖರ್ಚು ಮಾಡಬೇಕು. ಜಿಲ್ಲೆಯ ಸುತ್ತಮುತ್ತ ಬೆಳೆದ ತೆಂಗು, ತಾಳೆ, ರಾಮಫಲ, ಉಪ್ಪಾರಹಳ್ಳಿ ದಾಳಿಂಬೆ, ದೇವಸಮುದ್ರಮ ಕ್ಯಾಪ್ಸಿಕಂ, ಸ್ಟಾರ್ ಫೂಟ್, ಕರಬೂಜ, ಕೂಡ್ಲಿಗಿಯ ಚಿಕ್ಕಜೋಗಿಹಳ್ಳಿಯಲ್ಲಿ ಬೆಳೆದ ಹಲವು ಬಗೆಯ ರೋಸ್ ಹೂವುಗಳ ಪ್ರದರ್ಶನವು ಕೂಡ ತೋಟಗಾರಿಕೆ ಇಲಾಖೆಯಿಂದ ನಡೆಯಿತು.

ತುಂಗಾ ಗುಂಪಿನ ಬಾಳೆ ಬೆಳೆಯಿಂದ ತಯಾರಿಸಿದ ವಸ್ತುಗಳು: ಬಾಳೆಯ ಬೆಳೆಯಿಂದ ತಯಾರಿಸಿದ ಬುಟ್ಟಿ, ಟೋಪಿ, ಮನೆಗೆ ಉಪಯುಕ್ತವಾಗುವ ವಸ್ತುಗಳು, ಎಲ್ಲಾ ರೀತಿಯ ಬ್ಯಾಗ್ ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೊಪ್ಪಳದ ಆನೆಗೊಂದಿಯ ತುಂಗಾ ಸ್ವ- ಸಹಾಯ ಸಂಘದ ಮಹಿಳೆಯರು ಬಾಳೆಯಿಂದ ತಯಾರಿಸಿದ ವಿವಿಧ ರೀತಿಯ ವಸ್ತುಗಳು ನೋಡಲು ಬಲು ವಿಶೇಷವಾಗಿದ್ದವು. ಸ್ವ-ಸಹಾಯ ಸಂಘದ 4 ಜನ ಸದಸ್ಯರು ಸೇರಿ ತಯಾರಿಸಿದ ಪೆನ್ ಸ್ಟಾಂಡ್, ಫ್ರೂಟ್ ಬಾಕ್ಸ್, ಪ್ಲವರ್ ಬೊಕೆ, ಪರ್ಸ್, ಬ್ಯಾಗ್ ಮುಂತಾದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಸಂಘದಿಂದ ತಯಾರಿಸಿದ ವಸ್ತುಗಳನ್ನು ಇಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ನಮ್ಮ ವಸ್ತುಗಳಿಗೆ ಹೆಚ್ಚಿನ ರೀತಿಯ ಪ್ರಚಾರ ಸಿಗಲಿದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದು ತುಂಗಾ ಸಂಘದ ಸದಸ್ಯರಾದ ಅನಿತಾ ಅವರು.

ಗಮನ ಸೆಳೆದ ವೆಂಕಟಾಪುರದ ಕರಕುಶಲ ವಸ್ತುಗಳು: ಮಹಿಳಾ ಇಲಾಖೆಯ ವತಿಯಿಂದ ವೆಂಕಾಟಾಪುರ ಕ್ಯಾಂಪ್ ನ ಸ್ತ್ರೀ ಶಕ್ತಿ ಗುಂಪು ತಯಾರಿಸಿದ ವೈರ್ ಬ್ಯಾಗ್, ಪೇಪರ್ ಬ್ಯಾಗ್, ಮೇಣದ ಪತ್ತಿ, ಎಲ್ಲಾ ಕರಕುಶಲ ವಸ್ತುಗಳು ಮಹಿಳೆಯರಲ್ಲಿನ ಕೌಶಲ್ಯ ಪರಿಚಯಿಸುವಂತಿದ್ದವು. 7 ಸಂಘದ 70 ಜನ ಸದಸ್ಯರು ತಯಾರಿಸಿದ್ದ ವಿವಿಧ ವಸ್ತುಗಳ ಪ್ರಚಾರ ಮಾಡಲಾಯಿತು. ಕೈ ಬುಟ್ಟಿ, ಕೈಚೀಲ, ಮೇಣದ ಬತ್ತಿ ಮುಂತಾದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ರೀತಿಯ ಪ್ರದರ್ಶನ ಇದೇ ಮೊದಲಾಗಿದ್ದು ಇದರಿಂದ ನಾವು ತಯಾರಿಸಿದ ವಸ್ತುಗಳಿಗೆ ಒಂದಿಷ್ಟು ಪ್ರಚಾರದ ಜೊತೆಗೆ ಉಪಯೋಗವಾಗಬಹುದು ಎನ್ನುತ್ತಾರೆ ವೆಂಕಟಾಪುರ ಅಂಗನವಾಡಿ ಕಾರ್ಯಕರ್ತೆಯರಾದ ಸುಕನ್ಯಾ ಅವರು.

ನೋಡುಗರ ಕಣ್ಮನ ಸೆಳೆದ ಬಣಗಾರ್ ಪೆÇಟೋಗ್ರಾಫಿ: ರಾಜ್ಯದ ವಿವಿಧ ರೀತಿಯ ಮಳಿಗೆಗಳ ಜೊತೆಗೆ ನೋಡುಗರನ್ನು ಆಕರ್ಷಿಸಿದ್ದು ವಿಭಿನ್ನ ಶೈಲಿಯ ಚಿತ್ರಗಳಿಂದಲೇ ತಮ್ಮದೇ ಆದ ಛಾಪನ್ನು ಮೂಡಿಸಿರುವ ಶಿವಶಂಕರ್ ಬಣಗಾರ್ ಅವರ ಚಿತ್ರಗಳು. ಅವರ ಕ್ಯಾಮೆರಾ ಕೈಚಳಕದಲ್ಲಿ ಮೂಡಿದ ಹಲವಾರು ವಿಶೇಷ ಚಿತ್ರಗಳು ವಿಜಯನಗರ ಉದ್ಘಾಟನಾ ಸಮಾರಂಭದಲ್ಲಿ ನೋಡುಗರ ಕಣ್ಮನ ಸೆಳೆದವು. ಹಂಪಿಯ ಜಾತ್ರೆ, ಆನೆ ಸಾಲು, ಒಂಟೆ ಸಾಲು, ಸರಸ್ವತಿ ಟೆಂಪಲ್, ಕಲ್ಲಿನ ರಥ, ನಿಂತ ನೀರಲ್ಲಿ ಪ್ರತಿಬಿಂಬಿಸುವ ಕಲ್ಲಿನ ರಥಮ ಮನಮೋಹಕ ದೃಶ್ಯ ನೋಡುಗರನ್ನು ಆಕರ್ಷಿಸಿದವು.. ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ, ಪಶುಪಾಲನಾ ಇಲಾಖೆಯಿಂದ ವಿವಿಧ ತಳಿಗಳ ಪರಿಚಯ, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಗೆ ತೆಗೆದುಕೊಳ್ಳುವ ಕ್ರಮಗಳು ಕರಕುಶಲ ವಸ್ತುಗಳು, ಮಹಿಳೆಯರ ಚಿಕ್ಕಿ ಘಟಕದಲ್ಲಿ ತಯಾರಿಸುವ ಶೇಂಗಾ ಚಿಕ್ಕಿ, ವಿವಿಧ ರೀತಿಯ ಪುಸ್ತಕಗಳ ಪ್ರದರ್ಶನ ನೆರವೇರಿತು. ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು ಜಿಲ್ಲಾ ಕ್ರೀಡಾಂಗ ಣದಲ್ಲಿ ಏರ್ಪಡಿಸಿದ್ದ ಪ್ರತಿಯೊಂದು ಮಳಿಗೆಗೆ ಭೇಟಿ ನೀಡಿ ವೀಕ್ಷಿಸಿ ಖುಷಿಪಟ್ಟರು. ವಿದ್ಯಾರಣ್ಯ ವೇದಿಕೆಯ ಆವರಣದಲ್ಲಿರುವ 60 ಮಳಿಗೆಗಳನ್ನು ಸಚಿವ ಆನಂದಸಿಂಗ್ ಅವರು ಉದ್ಘಾಟಿಸಿದರು. ಸಚಿವರಿಗೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಇಲಾಖೆಯ ನಿರ್ದೇಶಕರಾದ ಸಿಂಧೂ ಬಿ.ರೂಪೇಶ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮತ್ತಿತರರು ಸಾಥ್ ನೀಡಿದರು.ವಿಜೃಂಭಣೆಯ ವಿಜಯನಗರ ಉತ್ಸವ
ಜನರ ಗಮನಸೆಳೆದ ವಾಸ್ತುಶೈಲಿ, ಕರಕುಶಲ ವಸ್ತುಗಳು
ವಿಜಯನಗರ(ಹೊಸಪೇಟೆ): ಜೋಗಜಲಪಾತದ ವಿಸ್ಮಯ ನೋಟ, ಪಟ್ಟದ ಕಲ್ಲು, ಕಲ್ಲಿನ ರಥದ ವಿಭಿನ್ನ ಶೈಲಿ, ಚಾಲುಕ್ಯರ ವಾಸ್ತು ಶಿಲ್ಪ, ವಿಶ್ವವಿಖ್ಯಾತ ಚೆನ್ನಪಟ್ಟದ ಗೊಂಬೆಗಳು, ನೋಡುಗರ ಕಣ್ಮನ ಸೆಳೆದ ಖ್ಯಾತ ಛಾಯಾ ಗ್ರಾಹಕರ ಬಣಗಾರರ ಚಿತ್ರಗಳು ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ವಿಜಯನಗರ ಉತ್ಸವದಲ್ಲಿ!. ವಿಜಯ ನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಮಳಿಗೆಗಳಲ್ಲಿ ಹಲವಾರು ವಿಶೇಷಗಳು ನೋಡುಗರನ್ನೊಮ್ಮೆ ಮೂಕವಿಸ್ಮಿತ ರನ್ನಾಗಿಸಿದವು.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ನಂದಿ ಹಿಲ್ಸ್, ಎಲ್ಲಾ ರೀತಿಯ ಸುಸಜ್ಜಿತವಾದ ವಾತಾವರಣವುಳ್ಳ ಸುವರ್ಣರಥ, ಶಿವಮೊಗ್ಗದ ಜೋಗಜಲ ಪಾತ, ಚಾಲುಕ್ಯರ ವಾಸ್ತು ಶಿಲ್ಪದ ವೈಭವ, ಉತ್ತರ ಭಾರತ ನಾಗರ ಶೈಲಿ ಮತ್ತು ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಾಸ್ತುಶೈಲಿಯ ವರ್ಣ ರಂಜಿತ ಚಿತ್ರಗಳು ವಿಶೇಷವಾ ಗಿದ್ದವು. ಚನ್ನಪಟ್ಟಣದ ಗೊಂಬೆ: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ವತಿಯಿಂದ ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳು, ಮೈಸೂರು ರೋಸ್ ವುಡ್, ಬೆಂಗಳೂರಿನಲ್ಲಿ ತಯಾರಿಸಿದ ವಿವಿಧ ರೀತಿಯ ಆಟಿಕೆ ವಸ್ತುಗಳು, ಸುಗಂಧ ಬೀರುವ ಅಗರಬತ್ತಿ, ಪುಟ್ಟದ ಪುಟ್ಟದ ಗೊಂಬೆಗಳ ತಯಾರಿ ಕೆಯಲ್ಲಿ ಮಕ್ಕಳು ನಿರತರಾಗಿರುವ ದೃಶ್ಯಗಳು ಕಂಡು ಬಂದವು.

ಜನನಿ ಟೀಮ್ ನ ವಿಶೇಷ ಕಾರ್ಯ: ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿ ಸುವ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿರುವ ಹೊಸಪೇಟೆಯ ಜನನಿ ತಂಡ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ವೀಕ್ಷಕರಿಗೆ ಮಾಹಿತಿ ನೀಡು ವಲ್ಲಿ ನಿರತರಾಗಿದ್ದರು. ಜನನಿ ತಂಡದಿಂದ ಇದುವರಗೆ 625 ಹೆರಿಗೆಗಳನ್ನು ಉಚಿತವಾಗಿ ಮಾಡಿಸಲಾಗಿದೆ. ತಾಯಂದಿರಿಗೆ ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸಲು ವಿವಿಧ ರೀತಿಯ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಬೇಳೆ, ಹೆಸರು ಒಳಗೊಂಡಂತೆ ಪೌಷ್ಠಿಕಾಂಶಯುಕ್ತ ಪದಾರ್ಥಗಳಿಂದ ತಯಾರಿಸಿದ ತಾಯಿ ಮಗುವಿನ ಚಿತ್ರ ನೋಡುಗರ ಗಮನ ಸೆಳೆಯಿತು. ಇದರ ಕುರಿತು ಮಾತನಾಡಿದ ಜನನಿ ತಂಡದ ಕಾರ್ಯದರ್ಶಿ ಹುಲಿಗೆಮ್ಮ ಅವರು ಮಳಿಗೆ ಮೂಲಕ ತಾಯಿ ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಕುರಿತು ಮಾಹಿತಿ ಮತ್ತು ಅರಿವು ಮೂಡಿಸುವ ಜೊತೆಗೆ ಸರ್ಕಾರದ ಹಲವು ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಹುಲಿಯ ಜೊತೆ ಫೆÇೀಟೋಗೆ ಫೆÇಸು ಕೊಟ್ಟ ಸಚಿವ ಆನಂದ್‍ಸಿಂಗ್: ಅರಣ್ಯ ಇಲಾಖೆಯಿಂದ ಸಮಾರಂ ಭದ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಮಳಿಗೆ ಯಲ್ಲಿ. ಝೂಲಾಜಿಕಲ್ ಪಾರ್ಕ್ ನಲ್ಲಿ ನೋಡಬಹುದಾದ ಹುಲಿ, ಚಿರತೆ, ಕರಡಿಯ ಚಿತ್ರಗಳನ್ನು ಪ್ರದರ್ಶನ ಏರ್ಪಡಿಸಿದ್ದರು. ವೀಕ್ಷಕರು ಅವುಗಳೊಂದಿಗೆ ಸೆಲ್ಫಿಗೆ ಫೆÇಸು ನೀಡು ತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತೆ ಕಂಡು ಬಂದವು. ಸಚಿವ ಆನಂದ್ ಸಿಂಗ್ ಅವರು ಹುಲಿಯ ಚಿತ್ರದೊ ಂದಿಗೆ ಫೆÇಟೋಗೆ ಫೆÇಸು ಕೊಟ್ಟಿದ್ದು ಎಲ್ಲರ ಗಮನಸೆಳೆಯಿತು.
ಗಮನ ಸೆಳೆದ ಬಾಳೆ ಗೊನೆ: ಒಂದು ಗೊನೆಯಲ್ಲಿ 75 ಕೆ.ಜಿ. ಬಾಳೆ ಬೆಳೆದು ಇತರರಿಗೆ ಮಾದರಿಯಾದ ರೈತ ಕೆ.ಬಸಪ್ಪ ಅವರು ಬೆಳೆದ ಬಾಳೆಯನ್ನು ತೋಟಗಾರಿಕೆ ಇಲಾಖೆಯಿಂದ ಪ್ರದರ್ಶನಕ್ಕೆ ಏರ್ಪಡಿಸಲಾಗಿತ್ತು. ಬಾಳೆಯ ಗಾತ್ರ ಮತ್ತು ಗೊನೆ ಎಲ್ಲರನ್ನು ತನ್ನತ್ತ ಸೆಳೆಯಿತು.

ರಾಯನಕೆರೆಯ ರೈತ ರಾಜಶೇಖರ್ ಅವರು ಬೆಳೆದ ವಿಶಿಷ್ಟ ಬೆಳೆಯಾದ ಡ್ರಾಗ್ಯಾನ್ ಫ್ರೂಟ್ ಬಗ್ಗೆ ಸಮಾರಂಭಕ್ಕೆ ಆಗಮಿಸಿದ್ದ ವೀಕ್ಷಕರು ಮಾಹಿತಿ ಪಡೆದಿದ್ದು ವಿಶೇಷವಾಗಿತ್ತು. ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಾಯವಾಗುವ ಡ್ರಾಗ್ಯಾನ್ ಫ್ರೂಟ್ ನ ಒಂದು ಹಣ್ಣು ಖರೀದಿಸಲು ಬರೋಬ್ಬರಿ 100 ರೂಪಾಯಿ ಖರ್ಚು ಮಾಡಬೇಕು. ಜಿಲ್ಲೆಯ ಸುತ್ತಮುತ್ತ ಬೆಳೆದ ತೆಂಗು, ತಾಳೆ, ರಾಮಫಲ, ಉಪ್ಪಾರಹಳ್ಳಿ ದಾಳಿಂಬೆ, ದೇವಸಮುದ್ರಮ ಕ್ಯಾಪ್ಸಿಕಂ, ಸ್ಟಾರ್ ಫೂಟ್, ಕರಬೂಜ, ಕೂಡ್ಲಿಗಿಯ ಚಿಕ್ಕಜೋಗಿಹಳ್ಳಿಯಲ್ಲಿ ಬೆಳೆದ ಹಲವು ಬಗೆಯ ರೋಸ್ ಹೂವುಗಳ ಪ್ರದರ್ಶನವು ಕೂಡ ತೋಟಗಾರಿಕೆ ಇಲಾಖೆಯಿಂದ ನಡೆಯಿತು.
ತುಂಗಾ ಗುಂಪಿನ ಬಾಳೆ ಬೆಳೆಯಿಂದ ತಯಾರಿಸಿದ ವಸ್ತುಗಳು: ಬಾಳೆಯ ಬೆಳೆಯಿಂದ ತಯಾರಿಸಿದ ಬುಟ್ಟಿ, ಟೋಪಿ, ಮನೆಗೆ ಉಪಯುಕ್ತವಾಗುವ ವಸ್ತುಗಳು, ಎಲ್ಲಾ ರೀತಿಯ ಬ್ಯಾಗ್ ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೊಪ್ಪಳದ ಆನೆಗೊಂದಿಯ ತುಂಗಾ ಸ್ವ- ಸಹಾಯ ಸಂಘದ ಮಹಿಳೆಯರು ಬಾಳೆಯಿಂದ ತಯಾರಿಸಿದ ವಿವಿಧ ರೀತಿಯ ವಸ್ತುಗಳು ನೋಡಲು ಬಲು ವಿಶೇಷವಾಗಿದ್ದವು. ಸ್ವ-ಸಹಾಯ ಸಂಘದ 4 ಜನ ಸದಸ್ಯರು ಸೇರಿ ತಯಾರಿಸಿದ ಪೆನ್ ಸ್ಟಾಂಡ್, ಫ್ರೂಟ್ ಬಾಕ್ಸ್, ಪ್ಲವರ್ ಬೊಕೆ, ಪರ್ಸ್, ಬ್ಯಾಗ್ ಮುಂತಾದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಸಂಘದಿಂದ ತಯಾರಿಸಿದ ವಸ್ತುಗಳನ್ನು ಇಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ನಮ್ಮ ವಸ್ತುಗಳಿಗೆ ಹೆಚ್ಚಿನ ರೀತಿಯ ಪ್ರಚಾರ ಸಿಗಲಿದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದು ತುಂಗಾ ಸಂಘದ ಸದಸ್ಯರಾದ ಅನಿತಾ ಅವರು.
ಗಮನ ಸೆಳೆದ ವೆಂಕಟಾಪುರದ ಕರಕುಶಲ ವಸ್ತುಗಳು: ಮಹಿಳಾ ಇಲಾಖೆಯ ವತಿಯಿಂದ ವೆಂಕಾಟಾಪುರ ಕ್ಯಾಂಪ್ ನ ಸ್ತ್ರೀ ಶಕ್ತಿ ಗುಂಪು ತಯಾರಿಸಿದ ವೈರ್ ಬ್ಯಾಗ್, ಪೇಪರ್ ಬ್ಯಾಗ್, ಮೇಣದ ಪತ್ತಿ, ಎಲ್ಲಾ ಕರಕುಶಲ ವಸ್ತುಗಳು ಮಹಿಳೆಯರಲ್ಲಿನ ಕೌಶಲ್ಯ ಪರಿಚಯಿಸುವಂತಿದ್ದವು. 7 ಸಂಘದ 70 ಜನ ಸದಸ್ಯರು ತಯಾರಿಸಿದ್ದ ವಿವಿಧ ವಸ್ತುಗಳ ಪ್ರಚಾರ ಮಾಡಲಾಯಿತು. ಕೈ ಬುಟ್ಟಿ, ಕೈಚೀಲ, ಮೇಣದ ಬತ್ತಿ ಮುಂತಾದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ರೀತಿಯ ಪ್ರದರ್ಶನ ಇದೇ ಮೊದಲಾಗಿದ್ದು ಇದರಿಂದ ನಾವು ತಯಾರಿಸಿದ ವಸ್ತುಗಳಿಗೆ ಒಂದಿಷ್ಟು ಪ್ರಚಾರದ ಜೊತೆಗೆ ಉಪಯೋಗವಾಗಬಹುದು ಎನ್ನುತ್ತಾರೆ ವೆಂಕಟಾಪುರ ಅಂಗನವಾಡಿ ಕಾರ್ಯಕರ್ತೆಯರಾದ ಸುಕನ್ಯಾ ಅವರು.
ನೋಡುಗರ ಕಣ್ಮನ ಸೆಳೆದ ಬಣಗಾರ್ ಪೆÇಟೋಗ್ರಾಫಿ: ರಾಜ್ಯದ ವಿವಿಧ ರೀತಿಯ ಮಳಿಗೆಗಳ ಜೊತೆಗೆ ನೋಡುಗರನ್ನು ಆಕರ್ಷಿಸಿದ್ದು ವಿಭಿನ್ನ ಶೈಲಿಯ ಚಿತ್ರಗಳಿಂದಲೇ ತಮ್ಮದೇ ಆದ ಛಾಪನ್ನು ಮೂಡಿಸಿರುವ ಶಿವಶಂಕರ್ ಬಣಗಾರ್ ಅವರ ಚಿತ್ರಗಳು. ಅವರ ಕ್ಯಾಮೆರಾ ಕೈಚಳಕದಲ್ಲಿ ಮೂಡಿದ ಹಲವಾರು ವಿಶೇಷ ಚಿತ್ರಗಳು ವಿಜಯನಗರ ಉದ್ಘಾಟನಾ ಸಮಾರಂಭದಲ್ಲಿ ನೋಡುಗರ ಕಣ್ಮನ ಸೆಳೆದವು. ಹಂಪಿಯ ಜಾತ್ರೆ, ಆನೆ ಸಾಲು, ಒಂಟೆ ಸಾಲು, ಸರಸ್ವತಿ ಟೆಂಪಲ್, ಕಲ್ಲಿನ ರಥ, ನಿಂತ ನೀರಲ್ಲಿ ಪ್ರತಿಬಿಂಬಿಸುವ ಕಲ್ಲಿನ ರಥಮ ಮನಮೋಹಕ ದೃಶ್ಯ ನೋಡುಗರನ್ನು ಆಕರ್ಷಿಸಿದವು.. ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ, ಪಶುಪಾಲನಾ ಇಲಾಖೆಯಿಂದ ವಿವಿಧ ತಳಿಗಳ ಪರಿಚಯ, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಗೆ ತೆಗೆದುಕೊಳ್ಳುವ ಕ್ರಮಗಳು ಕರಕುಶಲ ವಸ್ತುಗಳು, ಮಹಿಳೆಯರ ಚಿಕ್ಕಿ ಘಟಕದಲ್ಲಿ ತಯಾರಿಸುವ ಶೇಂಗಾ ಚಿಕ್ಕಿ, ವಿವಿಧ ರೀತಿಯ ಪುಸ್ತಕಗಳ ಪ್ರದರ್ಶನ ನೆರವೇರಿತು. ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು ಜಿಲ್ಲಾ ಕ್ರೀಡಾಂಗ ಣದಲ್ಲಿ ಏರ್ಪಡಿಸಿದ್ದ ಪ್ರತಿಯೊಂದು ಮಳಿಗೆಗೆ ಭೇಟಿ ನೀಡಿ ವೀಕ್ಷಿಸಿ ಖುಷಿಪಟ್ಟರು. ವಿದ್ಯಾರಣ್ಯ ವೇದಿಕೆಯ ಆವರಣದಲ್ಲಿರುವ 60 ಮಳಿಗೆಗಳನ್ನು ಸಚಿವ ಆನಂದಸಿಂಗ್ ಅವರು ಉದ್ಘಾಟಿಸಿದರು. ಸಚಿವರಿಗೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಇಲಾಖೆಯ ನಿರ್ದೇಶಕರಾದ ಸಿಂಧೂ ಬಿ.ರೂಪೇಶ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮತ್ತಿತರರು ಸಾಥ್ ನೀಡಿದರು.

Share and Enjoy !

Shares