ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸೂಗೂರು ; ಒಬ್ಬ ವ್ಯಕ್ತಿ ಮೃತ ಪಟ್ಟು ಮೂವರು ಗಾಯ ಗೊಂಡ ಘಟನೆ ಇಮದು ಬೆಳಿಗ್ಗೆ 10 40ರ ಸುಮಾರಿಗೆ ಜರುಗಿತ್ತು.
ಮೃತ ವ್ಯಕ್ತಿಯನ್ನು 22 ವರ್ಷದ ತಬರೇಜ್ ಭಕ್ಷ ತಂದೆ ಅಲ್ಲಾಭಕ್ಷ ಯಾದಗಿರಿ ಎಂದು ಗುರುತಿಸಲಾಗಿದ್ದು,
ಈತ ಲಿಂಗಸುಗೂರಿನಿಂದ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಕಲುಬುರಗಿಯ ಕಡೆಗೆ ಹೋಗುತ್ತಿರುವಾಗ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಪ್ಲಾಂಟ್ ಹತ್ತಿರ ಗುರುಗುಂಟಾದಿಂದ ಲಿಂಗಸುಗೂರಿನ ಕಡೆಗೆ ಬೈಕ್ ಮೇಲೆ ಬರುತ್ತಿದ್ದ ಸದ್ದಾಂ ಹುಸೇನ್ ಮತ್ತು ಗುಲಾಂ ರಸೂಲ್ ಹಾಗೂ ಅಜೀಮ್ ಪಾಶಾ ಮತ್ತು ಮೋಸಿನ್ ಪಾಶಾ ಎನ್ನುವವರ 2 ಬೈಕ್‌ಗಳಿಗೆ ಬಲಭಾಗದಲ್ಲಿ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ 3 ಬೈಕ್‌ಗಳು ಬಿದ್ದು, ಅಜೀಮ್ ಪಾಶಾ ಮತ್ತು ಮೋಶಿನ್ ಪಆಶಾ ಅವರ ಬಲಬಾಗದ ಕಾಲುಗಳು ಮುರಿದಿವೆ. ಸದ್ದಾಂ ಹುಸೇನ್ ಮತ್ತು ಗುಲಾಂ ರಸೂಲ್‌ರಿಗೆ ಗಂಭೀರ ಗಾಯಗಳಾಗಿವೆ.
ಅಪಘಾತಕ್ಕೊಳಗಾದವರೆಲ್ಲರೂ 22 ರಿಂದ 35 ವರ್ಷದವರಾಗಿದ್ದು ಯುವಕರ ಕುಟುಂಬಸ್ಥರ ಆಕ್ರನಂದನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿತ್ತು.