ವಿಜಯನಗರ ವಾಣಿ ಸುದ್ದಿ ರಾಯಚೂರು
ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಉಪ್ಪಾರನಂದಿಹಾಳ ಕಿಲ್ಲಾರಹಟ್ಟಿ ಮುಖ್ಯ ರಸ್ತೆಯಲ್ಲಿ ಬಹಳ ನೀರು ನಿಂತಿದ್ದು ರೈತರು ಜೀವದ ಹಂಗು ತೊರೆದು ಎತ್ತಿನಬಂಡಿ ಮೂಲಕ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿತು.
ಎರಡು ಮೂರು ದಿನಗಳಿಂದ ಬಾರಿ ಮಳೆ ಸುರಿದ ಹಿನ್ನಲೆಯಲ್ಲಿ ರಸ್ತೆ ತುಂಬಾ ನೀರು ನಿಂತಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಲು ಈ ರಸ್ತೆ ಮೂಲಕ ಹೋಗಬೇಕು ರೈತರು ತಮ್ಮ ಜೀವದ ಮತ್ತು ಎತ್ತುಗಳ ಜೀವದ ಹಂಗು ತೊರೆದು ಈ ನೀರಿನಲ್ಲಿ ಹೋಗಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ
ಈ ರಸ್ತೆ ಸಮಸ್ಯೆ ಕುರಿತು ಚುನಾಯಿತ ಜನಪ್ರತಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎನ್ನು ಪ್ರಯೋಜನವಾಗಿಲ್ಲ ಎಂದು ರೈತರು ಆರೋಪ ಮಾಡಿದರು.