ವಿಜಯನಗರ ವಾಣಿ ಸುದ್ದಿ ರಾಯಚೂರು
ಲಿಂಗಸೂಗೂರು : 2023 ರ ವೇಳೆಗೆ ರಾಜ್ಯದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ನಲ್ಲಿಯಲ್ಲಿ ನೀರು ಪೂರೈಕೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಜಲ ಜೀವನ್ ಮಿಷನ್ ಆರಂಭಿಸಿದೆ. ಯೋಜನೆಯಂತೆ ಸರ್ಕಾರ ಕೋಟಿ ಕೋಟಿ ವೆಚ್ಚದಲ್ಲಿ ಯೋಜನೆ ಕಾಮಗಾರಿ ಜಿಲ್ಲಾ ಪಂಚಾಯಿತಿ ಉಪ ವಿಬಾಗ ಲಿಂಗಸೂಗೂರು ಇವರಿಗೆ ಕಾಮಗಾರಿ ಆರಂಭಿಸಲು 67.45 ಲಕ್ಷ ರೂಪಾಯಿ ಆದೇಶ ಮಾಡಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡದನಾಳ ಸಹ ಲಿಂಗಸುಗೂರು ತಾಲ್ಲೂಕಿನ 44 ಕಡೆಗಳಲ್ಲಿ ಜಲ ಜೀವನ ಮಿಷನ್‌ನ ಕಾಮಗಾರಿ ಭರದಿಂದ ಸಾಗಿದೆ. ಆದ್ರೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹೊನ್ನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಢನಾಳ ಗ್ರಾಮದಲ್ಲಿ ಸರಿಯಾಗಿ ಕಾಮಗಾರಿ ನಡೆಯುತ್ತಿಲ್ಲ. ಗ್ರಾಮದಲ್ಲಿ ಚೆನ್ನಾಗಿರು ರಸ್ತೆಯನ್ನು ಒಡೆದು ಹಾಗೇ ಬಿಟ್ಟು ಹೋಗಿರುವುದು ರಸ್ತೆಯಲ್ಲಿ ತಗ್ಗು ಗುಂಡಿಗಳು ಹಾಗೇ ಇವೆ ರಸ್ತೆ ಒಡೆದು ಹಾಕಿ ಪೈಪ್‌ಗಳನ್ನ ಹಾಕಲಾಗುತ್ತಿದೆ. ಕಾಮಗಾರಿ ನಡೆದ ಸ್ಥಳದಲ್ಲಿ ಗುತ್ತಿಗೆದಾರನಾಗಲಿ, ಅಧಿಕಾರಿಗಳಾಗಲಿ ಯಾರು ಪರಿಶೀಲನೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.