ಹೂತಿದ್ದ ಮಹಿಳೆ ಶವ ಹೊರತೆಗೆದು ಗ್ರಾಮಸ್ಥರಿಂದ ವೃದ್ಧನ ಅಂತ್ಯಸಂಸ್ಕಾರ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು :ಜಿಲ್ಲೆ 

ಲಿಂಗಸೂಗೂರು ತಾಲ್ಲೂಕಿನ ನಿರಲಕೇರಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಹಿನ್ನಲೆಯಲ್ಲಿ ಹೂತಿದ್ದ ಶವ ಹೊರತೆಗೆದು ಅಂತ್ಯಸಂಸ್ಕಾರ ಮಾಡುವ ಮನಕಲಕುವ ಘಟನೆ  ಲಿಂಗಸಗೂರು ತಾಲೂಕಿನ ನಿರಲಕೇರಿ ಯಲ್ಲಿ ನಡೆದಿದೆ.ಈ ಗ್ರಾಮದಲ್ಲಿ ಹೊಸದಾಗಿ ಯಾರಾದರು ಮೃತಪಟ್ಟರೆ ಅವರನ್ನು ಮಣ್ಣು ಮಾಡಲು ಸ್ಮಶಾನದಲ್ಲಿ ಜಾಗ ಕೇಳಲೂ ಸಹ ಗೋಳಾಡ ಬೇಕು. ಗ್ರಾಮದಲ್ಲಿ ನಿನ್ನೆ ವೃದ್ಧ ಮೃತಪಟ್ಟಿದ್ದು ಸ್ಮಶಾನದಲ್ಲಿ ಜಾಗ ನೀಡದ ಹಿನ್ನೆಲೆ ಗ್ರಾಮಸ್ಥರು ಕಳೆದ ಎರಡು ತಿಂಗಳ ಹಿಂದೆ ಹೂತಿದ್ದ, ಅರೆ ಕೊಳೆತ ಸ್ಥಿತಿಯಲ್ಲಿರುವ ಶವ ತೆಗೆದು ಮೃತರ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ನಿನ್ನೆ ಅರೆಬರೆ ಕೊಳೆತೆ ಸ್ಥಿತಿಯಲ್ಲಿದ್ದ ಮಹಿಳೆಯ ಶವ ತೆಗೆದು ಗ್ರಾಮದ ವೃದ್ದನೋರ್ವನ ಅಂತ್ಯಸಂಸ್ಕಾರ ಮಾಡಲಾಗಿದೆ.ಶವ ಸಂಸ್ಕಾರಕ್ಕೆ ಜಾಗ ನೀಡಲು ಹಲವಾರು ಬಾರಿ ಮನವಿ ಮಾಡಿದ್ರು ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಗ್ರಾಮದಲ್ಲಿ ಇಂತಹ ಮನಕಲಕುವ ಘಟನೆ ನಡೆದಿದೆ.

 

Share and Enjoy !

Shares