ಕಂಪ್ಲಿ ವಿಜಯನಗರ ಜಿಲ್ಲೆ ಸೇರ್ಪಡೆ ಪ್ರಕರಣಕ್ಕೆ ಆಕ್ಷೇಪಣೆ ಸಲ್ಲಿಸಿದ ರಾಜ್ಯ ಸರ್ಕಾರ, ಡಿಸೆಂಬರ್ 2 ವಿಚಾರಣೆ!

Share and Enjoy !

Shares
Listen to this article

ಬೆಂಗಳೂರು, ಅಕ್ಟೋಬರ್ 7: ಕಂಪ್ಲಿ ತಾಲೂಕನ್ನ ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ನ ಪ್ರಕರಣವು ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ ಮತ್ತು ಸಚಿನ್ ಶಂಕರ್ ಮಗದುಮ್ ರವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು ವಿಚಾರಣೆ ಕೈಗೆತ್ತಿಕೊಂಡ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದು ಸದ್ರಿ ಆಕ್ಷೇಪಣೆಗೆ ಹೇಳಿಕೆಗಳನ್ನ ಸಲ್ಲಿಸಲು ಅರ್ಜಿದಾರರು 4 ವಾರಗಳ ಕಾಲ ಸಮಯಾವಕಾಶವನ್ನ ಕೋರಿದರು, ಅರ್ಜಿದಾರರ ಮನವಿಯನ್ನ ಪುರಸ್ಕರಿಸಿದ ನ್ಯಾಯಾಲಯ ಡಿಸೆಂಬರ್ 2 ಕ್ಕೆ ವಿಚಾರಣೆಯನ್ನ ಮುಂದೂಡಲಾಯಿತು.
ಈ ಹಿಂದೆ ಈಗಿನ ರಾಯಚೂರು ಜಿಲ್ಲೆಯಲ್ಲಿನ ಸಿಂಧನೂರು ತಾಲೂಕು ಅಂದು ಕೊಪ್ಪಳ ಜಿಲ್ಲೆಗೆ ಸೇರ್ಪಡಿಸಿದ ಅಧಿಸೂಚನೆಯನ್ನ ಪ್ರಶ್ನಿಸಿ ಅಂದಿನ ಮುಖ್ಯ ಮಂತ್ರಿ ಜೆ ಹೆಚ್ ಪಟೇಲ್ ರ ಅವಧಿಯಲ್ಲಿ ಸಿಂಧನೂರಿನ ಜನತೆ 1997 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಅಧಿಸೂಚನೆಯನ್ನ ರದ್ದು ಪಡಿಸಿ ಯಥಾಸ್ಥಿತಿ ರಾಯಚೂರು ಜಿಲ್ಲೆಗೆ ಸೇರಿಸಿದ ಪ್ರಕರಣದ ತೀರ್ಪನ್ನು ಸೇರಿದಂತೆ ರಾಜ್ಯದಲ್ಲಿ ಇಂತಹದ್ದೇ ಪ್ರಕರಣಗಳಲ್ಲಿ ಹೊರಡಿಸಿದ ಹಲವಾರು ತೀರ್ಪುಗಳ ಅಧಿಕೃತ ಪ್ರತಿಗಳನ್ನ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಕಂದಾಯ ಇಲಾಖೆಯಲ್ಲಿ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಧೃಡೀಕೃತ ಪ್ರತಿಗಳನ್ನ ಕಲೆ ಹಾಕಿದ್ದು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪಿಐಎಲ್ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಾದ ವಕೀಲ ಮೋಹನ್ ಕುಮಾರ್ ದಾನಪ್ಪ ತಿಳಿಸಿದರು,
ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸದೇ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಸರ್ಕಾರದ ಅಧಿಸೂಚನೆಯನ್ನ ರದ್ದು ಪಡಿಸಿ ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ರಾಜ್ಯ ಹೈಕೋರ್ಟ್‌ನಲ್ಲಿ 2021 ಮಾರ್ಚ್ 10‌ ರಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ಮತ್ತು ಕಂಪ್ಲಿ ತಾಲೂಕು ವಕೀಲರ ಬಳಗದ ಕಾರ್ಯಾಧ್ಯಕ್ಷರಾದ ಹಿರಿಯ ವಕೀಲ ಕೆ. ಪ್ರಭಾಕರ್ ರಾವ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಪಿಐಎಲ್ ಅರ್ಜಿಯನ್ನು ಸಲ್ಲಿಸಿದ್ದರು.

Share and Enjoy !

Shares