ವಿಜಯನಗರ(ಹೊಸಪೇಟೆ): ಶರನ್ನನವರಾತ್ರಿ ಉತ್ಸವ ನಿಮಿತ್ತ ನಗರದ ಪ್ರಸಿದ್ಧ ಊರಮ್ಮ ದೇವಿಗೆ ಖ್ಯಾತ ಮಹಿಳಾ ಉದ್ಯಮಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿಸಂಯುಕ್ತಾ ಬೆಳ್ಳಿಗಟ್ಟಿಗಳನ್ನು ಮಂಗಳವಾರ ಸಮರ್ಪಿಸಿದರು.
ಸ್ಥಳೀಯ ಊರಮ್ಮ ದೇವಿಗೆ ದೇವಸ್ಥಾನಕ್ಕೆ ಬೆಳಿಗ್ಗೆ ರಾಣಿ ಸಂಯುಕ್ತಾರ ರವರು ಬೆಂಬಲಿಗರೊಂದಿಗೆ ಆಗಮಿಸಿ ದೇವಿಗೆ ಅಭಿಷೇಕ, ಪೂಜೆ ನಡೆಸಿ ಉಡಿ ತುಂಬಿ ಕುಂಕುಮಾರ್ಚನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ದೇವಿಗೆ 7 ಬೆಳ್ಳಿ ಗಟ್ಟಿಯ ಇಟ್ಟಿಗೆ ಮಾದರಿಗಳನ್ನು ದಾನ ಮಾಡಿದರು.
ಬೆಳ್ಳಿಗಟ್ಟಿ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿಸಂಯುಕ್ತಾ, ಬೆಳ್ಳಿಗಟ್ಟಿಗಳನ್ನು ತೂಕಮಾಡಿಸಿಲ್ಲ. ದೇವಿಯ ಪ್ರೇರಣೆಯಿಂದ ಭಕ್ತಿಯಿಂದ ದೇವಿಗೆ ನೀಡಿರುವೆ. ಇಲಾಖೆ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ದೇವಿಗೆ ಅಲಂಕಾರ ಆಭರಣಗಳನ್ನು ಮಾಡಿಸಲಿ, ಅದರಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದರು.
ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿಯವರು ಸೀರೆ, ಬಾಗಿನವನ್ನು ರಾಣಿ ಸಂಯುಕ್ತಾರಿಗೆ ನೀಡಿ ಗೌರವಿಸಿದರು. ನಂತರ ಭಜನಾ ಮಂಡಳಿ, ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಉಡಿತುಂಭಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಗಾಳೆಪ್ಪ, ಬಂಡೆಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಚಂದ್ರಕಾಂತ ಕಾಮತ್, ಅನಂತ ಪದ್ಮನಾಭ, ರಾಘವೇಂದ್ರ, ಡಿ. ವೇಣುಗೋಪಾಲ್, ಬುಜ್ಜಿ, ನಾಗರಾಜ, ಹಿಂದೂ ಧಾರ್ಮಿಕ ಪರಿಷತ್ ಸದಸ್ಯ ಅನಿಲ್ ಜೋಶಿ, ಊರಮ್ಮದೇವಿ ದೇವಸ್ಥಾನದ ಅಧಿಕಾರಿ ಶಂಕ್ರಾಚಾರಿ ಇತರರಿದ್ದರು.
ಹೊಸಪೇಟೆ ನಗರದ ಪ್ರಸಿದ್ಧ ಗ್ರಾಮದೇವತೆ ಊರಮ್ಮ ದೇವಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿಸಂಯುಕ್ತಾ ಶರನ್ನನವಾರತ್ರಿ ನಿಮಿತ್ತ 7ಬೆಳ್ಳಿಗಟ್ಟಿಗಳನ್ನು ಮಂಗಳವಾರ ದಾನಮಾಡಿದರು.