ವಿಜಯನಗರ ವಾಣಿ ಸುದ್ದಿ ರಾಯಚೂರು
ಲಿಂಗಸುಗೂರು:ತಾಲೂಕಿನ ಯರಡೊಣ ಕ್ರಾಸ್ ಹತ್ತಿರ ಸಿದ್ದರಾಮೇಶ್ವರ ಗುರು ಮಠದಲ್ಲಿ ಶ್ರೀ ಮಠದ ಪಿಠಾಧಿಪತಿಗಳಾದ ಶ್ರೀ ಶ್ರೀ ಮುರುಘೇಂದ್ರ ಶಿವಾಚಾರ್ಯರು ಹಮ್ಮಿಕೊಂಡ ನವರಾತ್ರಿ ಅಂಗವಾಗಿ ನಡೆಯುವ ದೇವಿ ಪುರಾಣ ಕಾರ್ಯಕ್ರಮದಲ್ಲಿ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾಜಿ ಶಾಸಕರಾದ
ಮಾನಪ್ಪ ಡಿ ವಜ್ಜಲ್ ಭಾಗವಹಿಸಿ ಕಾರ್ಯಕ್ರದಲ್ಲಿ ಶ್ರೀಮಠದ ಬೆಳವಣಿಗೆ ಶ್ರೀಮಠದ ಶ್ರೀಗಳ ಸಮಾಜ ಮುಖಿ ಕಾರ್ಯಗಳ ಬಗ್ಗೆ ಶ್ರೀಗಳ ಸಮಾಜ ಸೇವಕಾರ್ಯ ಎಲ್ಲಾರಿಗೂ ಮಾದರಿಯಾಗಿದೆ ಸಮಾಜದ ಸುಧಾರಣೆ ಮನುಷ್ಯ ಶರಣರತ್ವತದ ಅಡಿಯಲ್ಲಿ ಜೀವಿಸಬೇಕು ತಂದೆ ತಾಯ್ಯಂದಿರು ಮಕ್ಕಳಲ್ಲಿ ಉತ್ತಮವಾದ ಸಂಸ್ಕೃತಿಯನ್ನ ನೀಡಿ ಬೇಳಸಬೇಕು ಮಕ್ಕಳು ಸುಸಂಸ್ಕೃತರಾದರೆ ಅವರ ಭವಿಷ್ಯದೊಂದಿಗೆ ಇಡಿ ನಾಡಿನ ಭವಿಷ್ಯದ ಉತ್ತಮವಾಗಿರುತ್ತೆ ಸೇವಾ ಮನೋಭಾವ ಎಲ್ಲಾರಲ್ಲಿ ಬೆಳೆಯಲ್ಲಿ ಎಂದು ಕಾರ್ಯಕ್ರಮದ ಕುರಿತು ವಿಶೇಷ ವಾಗಿ ಮಾತನಾಡಿದರು. ಬಾಲ ಮುತೈದ್ಯರಿಗೆ ಉಡಿತುಂಬುವ ಕಾರ್ಯಕ್ರಮವನ್ನ ನೇರವೇರಿದಿದರು
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್ ಡಾ. ಶಿವಬಸಪ್ಪ ಹೆಸರೂರು ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಮುದಕಪ್ಪ ನಾಯಕ ಅಯ್ಯನಗೌಡ ಧ್ಯಾಮಣ್ಣ ನಾಯಕ ಅಮರೇಶ ಮಡ್ಡಿ ವೇಂಕೊಬ್ ಹಟ್ಟಿ ಹಾಗೂ ಶ್ರೀ ಮಠದ ಸಾವಿರ ಭಕ್ತರು ಭಾಗವಹಿಸಿದ್ದರು