ನಿರಂತರ ಶ್ರಮ, ಪ್ರಯತ್ನದಿಂದ ಮಾತ್ರ ಯಶಸ್ಸುಗಳಿಸಲು ಸಾಧ್ಯ- ಸಿಜಿಸಿ ಮೋಹನ್ ಕುಮಾರ್ ದಾನಪ್ಪ!

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ 

ಗಂಗಾವತಿ,ಅ 11: ಹಿರೇ ಜಂತಕಲ್ಲಿನ ಜ್ಞಾನ ಸಂಗಮ ಗುರುಕುಲ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಹಮ್ಮಿಕೊಂಡ ಕರ್ನಾಟಕ ಹೈ ಕೋರ್ಟಿನ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಕಾಲೇಜ್ ಆಡಳಿತ ಮಂಡಳಿ ಮತ್ತು ಉಪನ್ಯಾಸಕರಿಂದ ಸನ್ಮಾನ ಮಾಡಲಾಯಿತು, 

ಸನ್ಮಾನ ಸ್ವೀಕರಿಸಿದ ಮುಖ್ಯ ಅತಿಥಿಯಾಗಿ ಆಗಮಿಸಿದ ಮೋಹನ್ ಕುಮಾರ್ ದಾನಪ್ಪ ನವರು” ಸಾಧಿಸುವ ದಾರಿ ಅಷ್ಟು ಸುಲಭವಾಗಿಲ್ಲ, ಸಾಧಿಸುವ ಛಲವುಳ್ಳವನಿಗೆ ಆ ದಾರಿ ಕಷ್ಟವೂ ಅಲ್ಲ, ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಸಾಧನೆ ದಾರಿ ಸುಲಭ, ಸೋತೆ ಅಂತ ಖಿನ್ನತೆಗೊಳಗಾಗದೆ ಎಲ್ಲಿ ಸೋತೆ ಅನ್ನುವುದನ್ನ ಕಂಡು ಹಿಡಿದು ಸರಿಯಾದ ಪ್ರಯತ್ನವನ್ನ ಮಾಡಿದಲ್ಲಿ ಗೆಲುವು ಖಚಿತ, ಹಾಗೆಯೇ ಅವಮಾನ, ಕೊಂಕು ಮಾತುಗಳನ್ನ ಸಹಿಸಿಕೊಂಡು ಸಾಧನೆ ಮೆಟ್ಟಿಲು ಏರಿದವನಿಗೆ ಸನ್ಮಾನವು ಖಚಿತ, ವಿಧ್ಯಾಭ್ಯಾಸದ ದಿನಗಳಲ್ಲಿ ಓದಿನ ಕಡೆ ಹೆಚ್ಚು ಗಮನಹರಿಸಿ ಮೊಬೈಲ್ ಗೀಳಿನಿಂದ ಹೊರ ಬರುವಂತೆ” ಉಪನ್ಯಾಸ ನೀಡಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು, 

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರಾದ ಪಾಲಾಕ್ಷ ರಾಥೋಡ್, ಉಪನ್ಯಾಸಕರಾದ ಬಸವರಾಜ್ ಭಾವಾಜಿ, ವೆಂಕಮ್ಮರವರು ಉಪಸ್ಥಿತಿಯಲ್ಲಿದ್ದರು, ಉಪನ್ಯಾಸಕ ಅರುಣ್ ಉಪಸ್ಥಿತರಿದ್ದರು.

 

Share and Enjoy !

Shares