ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸೂಗೂರು ; ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡುವದರ ಜೊತೆಗೆ ಮತ್ತೆ ಕೋವಿಡ್ ಲಸಿಕೆ ನೀಡುವದಲ್ಲಿ ಸರಕಾರ ಜೊತೆ ಕೈ ಜೋಡಿಸಿದ ಅಜೀಮ್ ಪ್ರೇಮಜೀ ಫೌಂಡೇಷನ್ ರವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ವೈದ್ಯಾಧಿಕಾರಿ ಡಾ: ಅನಂತಕುಮಾರ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅಜೀಮ್ ಪ್ರೇಮಜೀ ಫೌಂಡೇಷನ್ ವತಿಯಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಮಾಕಾಪೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಡಾಟಾ ಎಂಟ್ರಿ ಆಪರೇಟರ್ ಮತ್ತು ಸ್ವಯಂ ಸೇವಕರಿಗೆ, ಮತ್ತು ಸಾಮಾಜಿಕ ಆರೋಗ್ಯ ಕಾರ್ಯಕರ್ತರ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಜೀಮ್ ಪ್ರೇಮಜೀ ಫೌಂಡೇಷನ್ ವತಿಯಿಂದ ಮಾಕಾಪೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಲ್ಕು ಜನ ಡಾಟಾ ಎಂಟ್ರಿ ಆಪರೇಟರ್, ಮೂರು ಜನ ಸ್ವಯಂ ಸೇವಕರು, ಮತ್ತು ಒಂದು ಸಾಮಾಜಿಕ ಆರೋಗ್ಯ ಕಾರ್ಯಕರ್ತರ ನೇಮಕ ಮಾಡಿದ್ದು ಕೋವಿಡ್ ಲಸಿಕೆ ನೀಡಲು ಆರೋಗ್ಯ ಇಲಾಖೆಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಅಜೀಮ್ ಪ್ರೇಮಜೀ ಫೌಂಡೇಷನ್ ಸಂಯೋಜಕರಾದ ಮಹಮದ್ ರಫಿ, ಸುರೇಶ ಜೀ , ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸುಭಾಷ, ವೀರಯ್ಯ ಹಿರೇಮಠ ಆಶಾಕಾರ್ಯಕರ್ತೆಯರಾದ ಶಾಂತಾ ಬಡಿಗೇರ, ಯಂಕಮ್ಮ ತಲೆಕಟ್ಟು ಉದಾಸಮ್ಮ ಬ್ಯಾಲಿಹಾಳ, ಮತ್ತು ಡಾಟಾ ಎಂಟ್ರಿ ಆಪರೇಟರ್, ಸ್ವಯಂ ಸೇವಕರು , ಆಶಾಕಾರ್ಯಕರ್ತೆಯರು ಸೇರಿದಂತೆ ಮುಂತಾದವರು ಇದ್ದರು.