ಭೂಮಿಯಿಂದ ಒಕ್ಕಲೆಬ್ಬಿಸುತ್ತಿರುವದನ್ನು ತಡೆಗಟ್ಟಲು ಒತ್ತಾಯ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸೂಗೂರು : ತಾಲ್ಲೂಕಿನ  ಕರಡಕಲ್ ಗ್ರಾಮದ ಕೊರಮ ಸಮುದಾಯದ ಫಲಾನುಭವಿಗಳಿಗೆ  ಐವತ್ತೆರಡು ವರ್ಷಗಳಲ್ಲಿ ಹಿಂದೆ  ಭೂಮಿ ಸರ್ಕಾರ ಮಂಜೂರು ಮಾಡಿದೆ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ 412 ರ  ಜಮೀನುನಲ್ಲಿ ಭಾಗಗಳನ್ನಾಗಿ  ಪಟ್ಟಾ ಮಾಡಿಕೊಟ್ಟಿರುವ ಜಮೀನುಗಳ ಸರ್ವೇ ನಂಬರ  412/2 , 413/3, 413/4   ಜಮೀನುಗಳನ್ನು ತಪ್ಪಾಗಿ ಸರ್ವೇ ನಂಬರ  411ರಲ್ಲಿ ಸಾಗುವಳಿ ಮಾಡುತ್ತಾ ಬಂದಿರುವದನ್ನು ಪಟ್ಟಾ ಮಾಡಿಕೊಂಡಬೇಕು ಎಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ   ಕೊರಮ ಸಮಾಜದ ನೀಲಮ್ಮ ಹುಲಗಪ್ಪ, ಭೀಮವ್ವ ಹನುಮಪ್ಪ, ಮಾನಪ್ಪ ಮುದಕಪ್ಪ ಲಿಂಗಸುಗೂರು ಶಾಸಕ ಡಿ, ಎಸ್, ಹೂಲಗೇರಿ ಮತ್ತು ಸಹಾಯಕ ಆಯುಕ್ತ ರಾಹುಲ್, ಎಸ್, ಸಂಕನೂರು ರವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೊರಮ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಮಾನ್ವಿ ಸಮಾಜದ ಹಿರಿಯ ಮುಖಂಡರಾದ ನೀಲಕಂಠಪ್ಪ ಮಸ್ಕಿ ದುರಗಪ್ಪ ಪರಶುರಾಮ್ ನಕ್ಕುಂದಿ ರಾಮಮಣ್ಣ ಮಸರಕಲ್ ಚನ್ನಬಸವ ದೇವದುರ್ಗ   ಚನ್ನಬಸವ ಗಲಗ್ ತಿಮ್ಮಣ್ಣ ಕರಡಕಲ್ ಮೌನೇಶ ಕರಡಕಲ್ ಸಮಾಜದ ಮುಖಂಡರು ಭಾಗಿಯಾಗಿದ್ದರು.

 

Share and Enjoy !

Shares