ಅಮರ ಧಮ್ಮ ಜ್ಯೋತಿ ಕಾರ್ಯಕ್ರಮ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

ದೇವದುರ್ಗ   : ನಾಗಪುರ್ ಧೀಕ್ಷಾ ಭೂಮಿ ಯಿಂದ ಹೊತ್ತು ತಂದ ಅಮರ ಧಮ್ಮ ಜ್ಯೋತಿ  ಸ್ವಾಗತ ಕಾರ್ಯಕ್ರಮ  ದೇವದುರ್ಗ ತಾಲೂಕಿನ ಗಬ್ಬೂರ್ ಗ್ರಾಮದಲ್ಲಿ ನಡೆಯಿತು  ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಪ್ರಭುದ್ದ ಅವರು  ನಾವು ಪರಿಪೂರ್ಣ ಮನುಷ್ಯರಾಗಿ ಜೀವಿಸಲು ಬುದ್ಧ ಬೋಧಿಸಿದ ತ್ರಿರಣ ಪಂಚಶೀಲಗಳನ್ನು ಅನುಸರಿಸಬೇಕು ಮತ್ತು ಧಮ್ಮವನ್ನು ಒಪ್ಪಿಕೊಂಡ ಧಮ್ಮದ ಮಾರ್ಗದಲ್ಲಿ ನಡೆಯಬೇಕು ಅಂತ ತಿಳಿಸಿದರು.

ನಾಗ್ಪುರ್ ದೀಕ್ಷಾ ಭೂಮಿಯಿಂದ ತಂದಿರುವಂತಹ ಧಮ್ಮಾ ಸಂಕಲ್ಪ ಜ್ಯೋತಿ ಯನ್ನು ವರ್ಷ ವಾಸ ಕೊನೆಯ ಹುಣ್ಣಿಮೆಯ ದಿನವಾದಂದರಿಂದ  ಆಯುಷ್ಮಾತಿ  ಸರ್ವಮಂಗಳ ಆಯುಷ್ಮಾನ್  ರಮೇಶ (ರಾಷ್ಟ್ರಾಪಾಲ್)   ಗಬ್ಬೂರು ಮನೆಯಲ್ಲಿ ಮೊದಲನೆಯ ಧಮ್ಮ ಜ್ಯೋತಿ ಕಾರ್ಯಕ್ರಮ ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಬುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಬೌದ್ಧ ಉಪಸಕರು ಉಪಸಕಿಯರು, ಪ್ರಗತಿಪರ ಚಿಂತಕರು ಬುದ್ದಿ ಜೀವಿಗಳು  ಧಮ್ಮ‌ ಶಾಲೆ ಹೇಮನಾಳ ಗ್ರಾಮದ  ಮಕ್ಕಳು ಭಾಗವಹಿಸಿದ್ದರು.

ಈ ಕಾರ್ಯವನ್ನು ಉದ್ದೇಶಿಸಿ ಮಲ್ಲೇಶಪ್ಪ ಹುನುಗುಂದಬಾಡ್ ಅವರು  ತ್ರೀರಣ ಪಂಚ ಶೀಲಗಳ ಬಗ್ಗೆ ವಿವರವಾಗಿ ತಿಳಿಸಿದರು. ನಾಗರಾಜ ಶಾಂವಂತಗೇರಾ ಅವರು ಮಾತಾನಾಡಿ ಬುದ್ಧ ಧಮ್ಮ ಸಂಘದ ಬಗ್ಗೆ  ವಿಸ್ತಾರವಾಗಿ  ತಿಳಿಸಿದರು.

ನಂತರ ದೀಕ್ಷಾ ಭೂಮಿ ನಾಗ್ಪುರ್ ನಿಂದ ಜ್ಯೋತಿಯನ್ನು ದೇವದುರ್ಗ ತಾಲ್ಲೂಕಿಗೆ ತಂದಿರುವಂತಹ ಎಂಟು ಜನ ಬೌದ್ಧಚಾರಿಗಳಿಗೆ ಆಯುಸ್ಮಾನ್ ಬೂದೆಪ್ಪ‌  ‌ಅವರು ಗೌರವಿಸಿದರು ಈ   ಒಂದು ಕಾರ್ಯಕ್ರಮದ ನಿರುಪಣೆಯನ್ನು  ಬಸವಲಿಂಗ ನಾಗವಂಶಿ BSI ಮಾರ್ಗದರ್ಶಕರು ನೆರವೇರಿಸಿದರು. ಈ ಒಂದು ಕಾರ್ಯಕ್ರದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷರಾದ ಬಸವರಾಜ ಜಿನ್ನಾಪೂರ್,ಪ್ರಧಾನ ಕಾರ್ಯದರ್ಶಿಯಾದ  ಬಸವರಾಜ ಛಟ್ಟಿ ಶಾವಂತಗೇರಾ, ಸಿ.ರಮೇಶ ಬಸವರಾಜ ಭವಾನಿ ಅಡಿವೇಶ ಹೆಗ್ಗಡದಿನ್ನಿ, ಮೌನೇಶ ಹೇಮನಾಳ,ಮೌನೇಶ ಜಿನ್ನಾಪೂರ್, ಮಲ್ಲಿಕಾರ್ಜುನ ಗಬ್ಬೂರ್  ಹಾಗೂ  ಬುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಮತ್ತು‌ ಉಪಾಸಕ ಉಪಾಸಕಿಯರು ಉಪಸ್ಥೀತರಿದ್ದರು.

Share and Enjoy !

Shares